ರೋಹಿಂಗ್ಯಾ ಮುಸ್ಲಿಮರನ್ನು ಗಡೀಪಾರು ಮಾಡಿದ ಭಾರತ

7

ರೋಹಿಂಗ್ಯಾ ಮುಸ್ಲಿಮರನ್ನು ಗಡೀಪಾರು ಮಾಡಿದ ಭಾರತ

Published:
Updated:

ನವದೆಹಲಿ: ಅಸ್ಸಾಂನಲ್ಲಿ ಅಕ್ರಮವಾಗಿ ವಾಸವಾಗಿದ್ದ ಏಳು ರೋಹಿಂಗ್ಯಾ ಮುಸ್ಲಿಮರನ್ನು ಅವರ ದೇಶ ಮ್ಯಾನ್ಮಾರ್‌ಗೆ ಗುರುವಾರ ಗಡೀಪಾರು ಮಾಡಲಾಗಿದೆ. ಈ ವಲಸಿಗರ ವಿರುದ್ಧ ಇದೇ ಮೊದಲ ಬಾರಿಗೆ ಭಾರತ ಇಂತಹ ಕ್ರಮ ಕೈಗೊಂಡಿದೆ. 

2012ರಲ್ಲಿ ಈ ಅಕ್ರಮ ವಲಸಿಗರನ್ನು ಪತ್ತೆಹಚ್ಚಲಾಗಿತ್ತು. ಅಂದಿನಿಂದ ಇವರನ್ನು ಅಸ್ಸಾಂನ ಸಿಲ್ಚಾರ್‌ನಲ್ಲಿನ ಸೆಂಟ್ರಲ್‌ ಜೈಲಿನಲ್ಲಿ ಇಡಲಾಗಿತ್ತು. 

‘ಮಣಿಪುರ ಬಳಿಯ ಮೊರೆಹ್‌ ಗಡಿಯಿಂದ ಆಚೆಗೆ ಅವರನ್ನು ಕರೆದೊಯ್ದು ಮ್ಯಾನ್ಮಾರ್‌ ಅಧಿಕಾರಿಗಳ ವಶಕ್ಕೆ ನೀಡಲಾಗಿದೆ. ಈ ವಲಸಿಗರು ಮ್ಯಾನ್ಮಾರ್‌ನ ರೋಹಿಂಗ್ಯಾ ಮುಸ್ಲಿಮರೇ ಎಂಬುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ’ ಎಂದು ಅಸ್ಸಾಂನ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಭಾಸ್ಕರ್‌ ಮಹಾಂತ ತಿಳಿಸಿದ್ದಾರೆ. 

ತಮ್ಮನ್ನು ಮ್ಯಾನ್ಮಾರ್‌ಗೆ ಗಡೀಪಾರು ಮಾಡದಂತೆ ಕೇಂದ್ರಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ನಿರಾಶ್ರಿತ ರೋಹಿಂಗ್ಯಾ ಮುಸ್ಲಿಮರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿತ್ತು. ನಂತರವೇ, ಭಾರತ ಈ ಕ್ರಮವನ್ನು ಕೈಗೊಂಡಿದೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !