ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶದಲ್ಲಿ ಐಟಿ ದಾಳಿ: ₹ 281 ಕೋಟಿ ಪತ್ತೆ

Last Updated 9 ಏಪ್ರಿಲ್ 2019, 19:11 IST
ಅಕ್ಷರ ಗಾತ್ರ

ನವದೆಹಲಿ: ಮಧ್ಯಪ್ರದೇಶದಲ್ಲಿ ಎರಡು ದಿನಗಳಿಂದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮುಖ್ಯಮಂತ್ರಿ ಕಮಲನಾಥ್‌ ಮತ್ತು ಅವರ ಆಪ್ತರ ಮನೆ ಮೇಲೆ ನಡೆಸಿದ ದಾಳಿಯಲ್ಲಿ, ದಾಖಲೆ ಇಲ್ಲದ ಒಟ್ಟು ₹281 ನಗದು ಪತ್ತೆಯಾಗಿದೆಎಂದು ಆದಾಯ ತೆರಿಗೆ ಇಲಾಖೆ ಮಂಗಳವಾರ ತಿಳಿಸಿದೆ.

‘ವ್ಯಾಪಾರ, ರಾಜಕೀಯ ಚಟುವಟಿಕೆ ಮತ್ತು ನಾಗರಿಕ ಸೇವೆ ರೂಪದಲ್ಲಿರಾಜಕಾರಣಿಗಳಿಗೆ ಅಥವಾ ಮತದಾರರಿಗೆ ಹಂಚಲು ₹281 ಕೋಟಿಯನ್ನು ಸಂಗ್ರಹಿಸಲಾಗಿತ್ತು‘ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಧ್ಯಪ್ರದೇಶದ ವಿವಿಧ ಕಡೆಭಾನುವಾರ ಮತ್ತು ಸೋಮವಾರ ಐಟಿ ದಾಳಿ ನಡೆದಿತ್ತು.

‘ಮಧ್ಯಪ್ರದೇಶದಿಂದ ದೆಹಲಿಯ ಪ್ರಮುಖ ರಾಜಕೀಯ ಪಕ್ಷಕ್ಕೆ ಕಳುಹಿಸಲು ಯತ್ನಿಸುತ್ತಿದ್ದ ₹20 ಕೋಟಿ ಅಕ್ರಮ ಹಣವನ್ನೂ ವಶಕ್ಕೆ ಪಡೆಯಲಾಗಿದೆ’ ಎಂದು ಸಿಬಿಡಿಟಿ ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿ ವೇಳೆ, ₹14.6 ಕೋಟಿ ನಗದು, ಹುಲಿ ಚರ್ಮ, 252 ಮದ್ಯದ ಬಾಟಲಿ, ದಾಖಲೆ ಪತ್ರ, ಡೈರಿಗಳು,ಕಂಪ್ಯೂಟರ್‌ ಫೈಲ್‌ಗಳು, ನಕಲಿ ಬಿಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ದಾಖಲೆ ಪತ್ರಗಳಲ್ಲಿ ₹230 ಕೋಟಿ ಅಕ್ರಮ ವರ್ಗಾವಣೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT