‘ಇವಿಎಂ ಖರೀದಿಗೆ ₹4,555 ಕೋಟಿ ಅಗತ್ಯ’

7
ಲೋಕಸಭೆ, ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ

‘ಇವಿಎಂ ಖರೀದಿಗೆ ₹4,555 ಕೋಟಿ ಅಗತ್ಯ’

Published:
Updated:

ನವದೆಹಲಿ: ‘2019ರ ಸಾರ್ವತ್ರಿಕ ಚುನಾವಣೆಗೆ 10,60,000 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಏಕಕಾಲಕ್ಕೆ ಚುನಾವಣೆ ನಡೆಸಲು ಸದ್ಯ 12.9 ಲಕ್ಷ ಮತಪತ್ರ ಘಟಕಗಳು (ಬಿಯು), 9.4 ಲಕ್ಷ ನಿಯಂತ್ರಕ ಘಟಕ(ಸಿಯು)ಗಳು ಹಾಗೂ 12.3 ಲಕ್ಷ ಮತ ದೃಢೀಕರಣ ರಶೀದಿ ಯಂತ್ರ (ವಿವಿ ಪ್ಯಾಟ್ಸ್‌)ಗಳ ಕೊರತೆ ಇದೆ. ಬಿಯು, ಸಿಯು ಹಾಗೂ ವಿವಿಪ್ಯಾಟ್ಸ್‌ ಸೇರಿದ ಇವಿಎಂಗೆ ₹33,200 ಬೇಕಾಗುತ್ತದೆ. ಆದ್ದರಿಂದ ಇವಿಎಂ ಖರೀದಿಗೆ ₹ 4,555 ಕೋಟಿ ಅಗತ್ಯವಿದೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ.

‘ಇವಿಎಂಗಳನ್ನು 15 ವರ್ಷದವರೆಗೆ ಕಾಯ್ದಿಟ್ಟುಕೊಳ್ಳಬಹುದು. ಇದನ್ನು ಗಮನದಲ್ಲಿಟ್ಟುಕೊಂಡು, 2024 ರಲ್ಲಿ ಎರಡನೇ ಏಕಕಾಲಿಕ ಚುನಾವಣೆಗೆ ₹1751.17 ಕೋಟಿ ಮತ್ತು 2029 ರಲ್ಲಿ ಮೂರನೇ ಏಕಕಾಲಿಕ ಚುನಾವಣೆಗೆ ₹2017.93 ಕೋಟಿ ಬೇಕಾಗುತ್ತದೆ. 2034 ರಲ್ಲಿ ಏಕಕಾಲಿಕ ಚುನಾವಣೆಗೆ ಹೊಸ ಇವಿಎಂಗಳನ್ನು ಸಂಗ್ರಹಿಸಲು ₹13,981.58 ಕೋಟಿ ಅಗತ್ಯವಿದೆ. ಚಾಲ್ತಿಯಲ್ಲಿರುವ ದರಗಳನ್ನು ಆಧರಿಸಿ ವೆಚ್ಚಗಳನ್ನು ಲೆಕ್ಕಹಾಕಲಾಗಿದೆ’ ಎಂದು ವರದಿ ಹೇಳಿದೆ.

ಏಕಕಾಲಕ್ಕೆ ಚುನಾವಣೆ ನಡೆಸಿದರೆ ಇವಿಎಂ ಹಾಗೂ ಚುನಾವಣಾ ಸಾಮಗ್ರಿ ಹೊರತುಪಡಿಸಿ ಹೆಚ್ಚಿನ ವೆಚ್ಚ ತಗಲುವುದಿಲ್ಲ. ದೊಡ್ಡ ಮತಗಟ್ಟೆಗಳಲ್ಲಿ ಹೆಚ್ಚುವರಿ ಸಿಬ್ಬಂದಿ ಹಾಗೂ ಇವಿಎಂ ಮಾತ್ರ ಬೇಕಾಗಬಹುದು ಎಂದು ಚುನಾವಣಾ ಆಯೋಗದ ವರದಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !