ತಮಿಳುನಾಡಿನ 9 ಕಡೆ ಇ.ಡಿ ದಾಳಿ

7
ಎಸ್‌ಬಿಐಗೆ ₹90 ಕೋಟಿ ವಂಚನೆ

ತಮಿಳುನಾಡಿನ 9 ಕಡೆ ಇ.ಡಿ ದಾಳಿ

Published:
Updated:

ನವದೆಹಲಿ: ಭಾರತೀಯ ಸ್ಟೇಟ್‌ ಬ್ಯಾಂಕ್‌ನಿಂದ (ಎಸ್‌ಬಿಐ) ಪಡೆದ ₹90 ಕೋಟಿ ಸಾಲದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು (ಇ.ಡಿ) ಶನಿವಾರ ತಮಿಳುನಾಡಿನ 9 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

ಇನ್ಷುಮತಿ ರಿಫೈನರೀಸ್ ಪ್ರೈವೇಟ್ ಲಿಮಿಟೆಡ್ ಒಡೆಯ ಆರ್‌.ಶೆನ್‌ ಬಗಾನ್‌ ಹಾಗೂ ಇತರರಿಗೆ ಸೇರಿದ ವಿರುಧುನಗರ, ಮದುರೈ ಹಾಗೂ ಕೊಯಮತ್ತೂರಿನ ಮನೆ ಮತ್ತು ಕಚೇರಿಗಳಿಂದ ಸಾಲ ಖಾತ್ರಿ ಪತ್ರ (ಎಲ್‌ಒಸಿ) ಸೇರಿದಂತೆ ಇನ್ನಿತರ ದಾಖಲೆ ವಶಪಡಿಸಿ ಕೊಳ್ಳಲಾಗಿದೆ.

ಇನ್ಷುಮತಿ ರಿಫೈನರೀಸ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ.

ಬ್ಯಾಂಕ್‌ಗೆ ಸುಳ್ಳು ಮಾಹಿತಿ ನೀಡಿ ₹87.36 ಕೋಟಿ ಸಾಲ ಪಡೆದು ವಂಚಿಸಿದ ಶೆನ್‌ಬಗಾನ್‌ ಮತ್ತು ಇತರರ ವಿರುದ್ಧ ಸಿಬಿಐ ಈ ಮೊದಲು ಎಫ್‌ಐಆರ್‌ ದಾಖಲಿಸಿತ್ತು. ಅದರ ಆಧಾರದ ಮೇಲೆ ಇ.ಡಿ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.  

 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !