ಮಹಿಳೆಯರ ಪ್ರವೇಶಕ್ಕೆ ವಿರೋಧವಿಲ್ಲ, ಸಂಪ್ರದಾಯ ಬದಲಿಸಬೇಡಿ: ಆರ್‌ಎಸ್‌ಎಸ್

7

ಮಹಿಳೆಯರ ಪ್ರವೇಶಕ್ಕೆ ವಿರೋಧವಿಲ್ಲ, ಸಂಪ್ರದಾಯ ಬದಲಿಸಬೇಡಿ: ಆರ್‌ಎಸ್‌ಎಸ್

Published:
Updated:

ಮುಂಬೈ: ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ಕೇರಳದಲ್ಲಿ ಬಿಜೆಪಿ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಆರ್‌ಎಸ್‌ಎಸ್ ಬೆಂಬಲ ಸೂಚಿಸಿದೆ.

ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ನಮ್ಮ ವಿರೋಧವಿಲ್ಲ, ಆದರೆ ದೇವಾಲಯಗಳಿಗೂ ಅದರದ್ದೇ ಆದ ಸಂಪ್ರದಾಯಗಳಿವೆ. ಅದನ್ನು ಪಾಲಿಸಬೇಕು ಎಂದು ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ಸುರೇಶ್ ಜೋಷಿ ಹೇಳಿದ್ದಾರೆ.

ಮುಂಬೈನಲ್ಲಿ ನಡೆದ ಸಂಘ ಪರಿವಾರದ ಸಂಘಟನೆಗಳ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಜೋಷಿ ಈ ರೀತಿ ಹೇಳಿರುವುದಾಗಿ ಮಾತೃಭೂಮಿ ಪತ್ರಿಕೆ ವರದಿ ಮಾಡಿದೆ.

ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಬರುವ ಮುನ್ನ ಎಲ್ಲ ದೇವಾಲಯಗಳಲ್ಲಿಯೂ ಮಹಿಳೆಯರ ಪ್ರವೇಶ ಅನುಮತಿ ನೀಡಬೇಕೆಂದು ಆರ್‌ಎಸ್‌ಎಸ್ ಒತ್ತಾಯಿಸಿತ್ತು. ಆದರೆ ಶಬರಿಮಲೆ ತೀರ್ಪು ಬಂದ ನಂತರ ನಿಲುವು ಬದಲಿಸಿತ್ತು.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !