ಸೋನಲ್‌ ಮಾನಸಿಂಗ್‌, ರಾಕೇಶ್‌ ಸಿನ್ಹಾ ಸೇರಿ ನಾಲ್ವರು ರಾಜ್ಯಸಭೆಗೆ ನಾಮನಿರ್ದೇಶನ

7
Rajya sabha, President

ಸೋನಲ್‌ ಮಾನಸಿಂಗ್‌, ರಾಕೇಶ್‌ ಸಿನ್ಹಾ ಸೇರಿ ನಾಲ್ವರು ರಾಜ್ಯಸಭೆಗೆ ನಾಮನಿರ್ದೇಶನ

Published:
Updated:
ಸೋನಲ್‌ ಮಾನಸಿಂಗ್‌ 

ನವದೆಹಲಿ: ಆರ್‌ಎಸ್‌ಎಸ್‌ ಚಿಂತಕ ರಾಕೇಶ್‌ ಸಿನ್ಹಾ, ಶಾಸ್ತ್ರೀಯ ನೃತ್ಯಗಾರ್ತಿ ಸೋನಲ್‌ ಮಾನಸಿಂಗ್‌ ಸೇರಿ ನಾಲ್ವರನ್ನು ರಾಜ್ಯ ಸಭಾ ಸದಸ್ಯರಾಗಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಶನಿವಾರ ನಾಮನಿರ್ದೇಶನ ಮಾಡಿದ್ದಾರೆ.

ಕಲೆ, ಸಾಹಿತ್ಯ, ವಿಜ್ಞಾನ ಹಾಗೂ ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ ವಿಶೇಷ ಜ್ಞಾನವುಳ್ಳವರು, ಸಾಧನೆ ಮಾಡಿದ 12 ಜನರನ್ನು ರಾಜ್ಯ ಸಭೆಗೆ ನೇರವಾಗಿ ಆಯ್ಕೆ ಮಾಡುವ ಅವಕಾಶವನ್ನು ರಾಷ್ಟ್ರಪತಿಗೆ ಸಂವಿಧಾನ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸಲಗೆ ಮೇರೆಗೆ ರಾಜ್ಯ ಸಭೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ನೂತನ ಸದಸ್ಯರನ್ನು ಆಯ್ಕೆ ಮಾಡಿರುವುದಾಗಿ ಪ್ರಧಾನ ಮಂತ್ರಿಗಳ ಕಚೇರಿ(ಪಿಎಂಒ) ತಿಳಿಸಿದೆ. 

ಶಿಲ್ಪಿ ರಘುನಾಥ್‌ ಮೊಹಪಾತ್ರ, ಉತ್ತರ ಪ್ರದೇಶದ ಮಾಜಿ ಸಂಸದ ಮತ್ತು ದಲಿತ ಮುಖಂಡ ರಾಮ್‌ ಶಕಲ್‌, ಶಾಸ್ತ್ರೀಯ ನೃತ್ಯ ಪ್ರಕಾರಗಳಲ್ಲಿ ಸಾಧನೆ ಮಾಡಿರುವ ಸೋನಲ್‌ ಮಾನಸಿಂಗ್ ಹಾಗೂ ಆರ್‌ಎಸ್‌ಎಸ್‌ ಚಿಂತಕರಾಗಿ ಗುರುತಿಸಿಕೊಂಡಿರುವ ರಾಕೇಶ್‌ ಸಿನ್ಹಾ ಅವರು ರಾಜ್ಯ ಸಭೆಗೆ ನಾಮನಿರ್ದೇಶಿಸಿದ್ದಾರೆ.

ಸಚಿನ್‌ ತೆಂಡೂಲ್ಕರ್‌, ರೇಖಾ, ಅನು ಆಗಾ ಹಾಗೂ ಕೆ.ಪರಸರಣ್‌ ಅವರ ಅವಧಿ ಪೂರ್ಣಗೊಂಡು ತೆರವಾಗಿರುವ ಸ್ಥಾನಗಳಿಗೆ ನೂತನ ಸದಸ್ಯರ ಹೆಸರನ್ನು ನಿರ್ದೇಶಿಸಲಾಗಿದೆ. 

ರಾಮ್‌ ಶಕಲ್‌: ಉತ್ತರ ಪ್ರದೇಶದ ರಾಬರ್ಟ್ಸ್‌ಗಂಜ್‌ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ದಲಿತ ಸಮುದಾಯದ ಉನ್ನತಿಗಾಗಿ ಬದುಕಿನ ಬಹು ಸಮಯವನ್ನು ಮೀಸಲಿಟ್ಟಿರುವ ದಲಿತ ನಾಯಕ ರಾಮ್‌ ಶಕಲ್‌. ರೈತರು, ಕಾರ್ಮಿಕರು ಹಾಗೂ ವಲಸಿಗರ ಸಮಸ್ಯೆಗಳ ಪರವಾಗಿ ಹೋರಾಟ ನಡೆಸಿದವರು ಎಂದು ಪಿಎಂಒ ಹೇಳಿದೆ. 

ರಾಕೇಶ್‌ ಸಿನ್ಹಾ: ದೆಹಲಿ ಮೂಲದ ’ಇಂಡಿಯಾ ಪಾಲಿಸಿ ಫೌಂಡೇಷನ್‌’ ಸಂಸ್ಥಾಪಕರಾಗಿರುವ ರಾಕೇಶ್‌ ಸಿನ್ಹಾ, ದೆಹಲಿ ವಿಶ್ವವಿದ್ಯಾಲಯದ ಮೋತಿಲಾಲ್‌ ನೆಹರು ಕಾಲೇಜಿನಲ್ಲಿ ಪ್ರೊಫೆಸರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಪರಿಷತ್ತಿನ ಸದಸ್ಯರೂ ಆಗಿದ್ದಾರೆ. 

ಸೋನಲ್‌ ಮಾನಸಿಂಗ್: ಭರತನಾಟ್ಯ ಮತ್ತು ಒಡಿಸ್ಸಿ ನೃತ್ಯ ಪ್ರಕಾರಗಳಲ್ಲಿ ಸುಮಾರು ಆರು ದಶಕಗಳಿಂದ ಪ್ರದರ್ಶನ ನೀಡುತ್ತಿದ್ದಾರೆ. 1977ರಲ್ಲಿ ಮಾನಸಿಂಗ್ ಅವರು ಭಾರತೀಯ ಶಾಸ್ತ್ರೀಯ ನೃತ್ಯ ಕೇಂದ್ರವನ್ನು ದೆಹಲಿಯಲ್ಲಿ ಸ್ಥಾಪಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತೆ, ನೃತ್ಯ ಗುರು, ನೃತ್ಯ ನಿರ್ದೇಶಕಿಯಾಗಿಯೂ ಖ್ಯಾತರಾಗಿದ್ದಾರೆ. 

ರಘುನಾಥ್‌ ಮೊಹಪಾತ್ರ: ಉಬ್ಬು ಶಿಲ್ಪ ಕಲಾವಿದಾರಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮೊಹಪಾತ್ರ ಅವರು 1959ರಿಂದ ಶಿಲ್ಪ ಕಲೆ ಅಭ್ಯಾಸ ಮಾಡುತ್ತಿದ್ದಾರೆ. ಈವರೆಗೂ ಸುಮಾರು 2000 ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. ಪುರಿಯ ಶ್ರೀ ಜಗನ್ನಾಥ ದೇವಸ್ಥಾನದ ಕೆತ್ತನೆಗಳಲ್ಲಿ ಸೌಂದರ್ಯ ಮರುಸ್ಥಾಪನೆಯಲ್ಲಿ ಶ್ರಮಿಸಿದ್ದಾರೆ. ಸಾಂಪ್ರದಾಯಿಕ ಶಿಲ್ಪಗಳು ಹಾಗೂ ಸ್ಮಾರಕಗಳ ಸಂರಕ್ಷಣೆಯಲ್ಲಿ ಕೊಡುಗೆ ನೀಡಿದ್ದಾರೆ. ಪ್ಯಾರಿಸ್‌ನ ಬೌದ್ಧ ಮಂದಿರದಲ್ಲಿನ ಮರದ ಕೆತ್ತನೆಯ ಬುದ್ಧ ಹಾಗೂ ಸಂಸತ್‌ ಸೆಂಟ್ರಲ್‌ ಹಾಲ್‌ನಲ್ಲಿ ಇಡಲಾಗಿರುವ 6 ಅಡಿ ಎತ್ತರದ ಸೂರ್ಯ ದೇವರ ಕೆತ್ತನೆಗಳನ್ನು ಮನ್ನಣೆ ತಂದುಕೊಟ್ಟಿವೆ. 

 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !