ಗುರುವಾರ , ಆಗಸ್ಟ್ 22, 2019
21 °C

ಆರ್‌ಟಿಐ ಕಾರ್ಯಕರ್ತರು ವಶಕ್ಕೆ

Published:
Updated:

ನವದೆಹಲಿ: ಮಾಹಿತಿ ಹಕ್ಕು ಕಾಯ್ದೆ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಬಾರದು  ಎಂದು ಒತ್ತಾಯಿಸಲು ರಾಷ್ಟ್ರಪತಿ ಭವನದ ಎದುರು ಜಮಾಯಿಸಿದ್ದ ನೂರಾರು ಆರ್‌ಟಿಐ ಕಾರ್ಯಕರ್ತರನ್ನು ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ. 

ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರನ್ನು ಭೇಟಿಯಾಗಲು ರಾಷ್ಟ್ರಪತಿ ಭವನದ 38ನೇ ಹೊರಬಾಗಿಲಿನ ಬಳಿ ಹಾಜರಿದ್ದರು. ಈ ವೇಳೆ ದೆಹಲಿ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದು, ಮಂದಿರ್‌ ಮಾರ್ಗ್‌ ಪೊಲೀಸ್‌ ಠಾಣೆಗೆ ಕರೆದೊಯ್ದರು.

ಹೋರಾಟಗಾರ್ತಿ ಅಂಜಲಿ ಭಾರದ್ವಾಜ್‌ ಮಾತನಾಡಿ, ‘ಶಾಂತಿಯುತವಾಗಿ ಮನವಿ ಪತ್ರ ಸಲ್ಲಿಸುವುದು ನಮ್ಮ ಹಕ್ಕು. ಸಂಸತ್‌ ಅನುಮೋದನೆ ಪಡೆದಿರುವ ವಿವಾದಿತ ಮಾಹಿತಿ ಹಕ್ಕು ಕಾಯ್ದೆ ತಿದ್ದುಪಡಿ ಮಸೂದೆಗೆ ತಡೆ ಹಿಡಿಯುವಂತೆ ಕೋರಿ ಅರ್ಜಿ ಸಲ್ಲಿಸಲು ಬಂದರೆ ಪೊಲೀಸರು ಈ ಹಕ್ಕನ್ನೂ ಕಸಿದುಕೊಂಡಿದ್ದಾರೆ. ಇದು ಪ್ರಜಾಪ್ರಭುತ್ವವೇ’ ಎಂದು ಪ್ರಶ್ನಿಸಿದ್ದಾರೆ. 

Post Comments (+)