ಶುಕ್ರವಾರ, ನವೆಂಬರ್ 22, 2019
25 °C

ಸಾಹೋ: ಸುಜಿತ್‌ ಭಾವನಾತ್ಮಕ ಪೋಸ್ಟ್‌

Published:
Updated:
Prajavani

‘ಸಾಹೋ’ ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದ ಕಾರಣ ನಿರ್ದೇಶಕ ಸುಜಿತ್‌ ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ.

ತಮ್ಮ ದೀರ್ಘವಾದ ಪೋಸ್ಟ್‌ನಲ್ಲಿ ಅವರು, ತಮ್ಮ ವೃತ್ತಿಬದುಕಿನ ಕುರಿತು ಬರೆದುಕೊಂಡಿದ್ದಾರೆ. ಯುವಕರು ತಮ್ಮ ಚಿತ್ರವನ್ನು ಮತ್ತೊಮ್ಮೆ ನೋಡಿ, ಮನರಂಜನೆ ಪಡೆದುಕೊಳ್ಳಿ ಎಂದು ಹೇಳಿದ್ದಾರೆ.

‘ಸಾಹೋ’ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ₹350 ಕೋಟಿ ಬಾಚಿಕೊಂಡಿದೆ ಎಂಬ ಸುದ್ದಿ ಹರಿದಾಡುತ್ತಿದ್ದರೂ, ಜನರ ಮನಸ್ಸು ಗೆಲ್ಲುವಲ್ಲಿ ವಿಫಲವಾಗಿದೆ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

‘17 ವರ್ಷದ ಯುವಕ ಕಿರುಚಿತ್ರ ನಿರ್ಮಾಪಕನಾಗಿ ರೂಪುಗೊಂಡ.  ತನ್ನ ವೃತ್ತಿಯನ್ನು ಸಣ್ಣ ಮಟ್ಟದಿಂದ ಆರಂಭಿಸಿ, ಸಾಹೋದಂತಹ ದೊಡ್ಡ ಬಜೆಟ್‌ ಸಿನಿಮಾ ಮಾಡಲು ಸಾಧ್ಯವಾಗಿದ್ದು ಹೇಗೆ’ ಎಂಬುದನ್ನು ಸುಜಿತ್ ತಮ್ಮ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ.

‘ಮೊದಲಿಗೆ ಸಿನಿಮಾ ಪಯಣ ಆರಂಭವಾದಾಗ ಯಾವುದೇ ತಂಡ ಇರಲಿಲ್ಲ. ದುಡ್ಡು ಇರಲಿಲ್ಲ. ಬೆಂಬಲ ಕೂಡ ಶೂನ್ಯವಾಗಿತ್ತು’ ಎಂದು ಅವರು ಹೇಳಿಕೊಂಡಿದ್ದಾರೆ.

‘ಸಾಹೋ ಬಗ್ಗೆ ಜನರಿಗೆ ಅಪಾರ ನಿರೀಕ್ಷೆ ಇದ್ದಿದ್ದರಿಂದ ಹೀಗೆ ಆಗಿರಬಹುದು’ ಎಂದು ಅವರು ಹೇಳಿಕೊಂಡಿದ್ದಾರೆ. 

ಪ್ರತಿಕ್ರಿಯಿಸಿ (+)