ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯ್ಯಪ್ಪ ಭಕ್ತರ ನಂಬಿಕೆ ರಕ್ಷಣೆಗೆ ಶಾಸನ: ಆಗ್ರಹ

ಕೇಂದ್ರಕ್ಕೆ ಕೇರಳ ಸರ್ಕಾರ ಆಗ್ರಹ
Last Updated 19 ಜೂನ್ 2019, 18:18 IST
ಅಕ್ಷರ ಗಾತ್ರ

ತಿರುವನಂತಪು: ಶಬರಿಮಲೆಯ ಸ್ವಾಮಿ ಅಯ್ಯಪ್ಪ ಭಕ್ತರ ನಂಬಿಕೆಯನ್ನು ಗೌರವಿಸುವ ಜೊತೆಗೆ, ಅದನ್ನು ರಕ್ಷಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಸೂಕ್ತ ಶಾಸನ ರೂಪಿಸಬೇಕು ಎಂದು ಕೇರಳ ಸರ್ಕಾರ ಕೇಂದ್ರವನ್ನು ಬುಧವಾರ ಒತ್ತಾಯಿಸಿದೆ.

ಮಹಿಳೆಯರು ಸ್ವಾಮಿ ಅಯ್ಯ‍ಪ್ಪ ದೇವಸ್ಥಾನವನ್ನು ಪ್ರವೇಶಿಸುವುದನ್ನು ವಿರೋಧಿಸಿ ಕೊಲ್ಲಂ ಸಂಸದ ಎನ್‌.ಕೆ.ಪ್ರೇಮಚಂದ್ರನ್ ಅವರು ಅಧಿವೇಶನದಲ್ಲಿ ಖಾಸಗಿ ಮಸೂದೆಯೊಂದನ್ನು ಮಂಡಿಸಲಿದ್ದಾರೆ. ಈ ವಾರ ಮಸೂದೆ ಚರ್ಚೆಗೆ ಬರುವ ಸಾಧ್ಯತೆಯೂ ಇದೆ. ಇದೇ ಸಂದರ್ಭದಲ್ಲಿ ಶಾಸನ ರೂಪಿಸುವಂತೆ ಕೇರಳ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದೆ.

ಒತ್ತಡ ಹೇರಲಿ: ‘ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿ ದಂತೆ ಖಾಸಗಿ ಮಸೂದೆ ಮಂಡನೆ ಯಾಗಲಿದೆ. ಆದರೆ, ಈ ಹಿಂದೆ ಮಂಡ ನೆಯಾದ ಖಾಸಗಿ ಮಸೂದೆಗಳ ಗತಿ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ’ ಎಂದು ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್‌ ಹೇಳಿದರು.

‘ಇಂತಹ ಸ್ಥಿತಿ, ಮಂಡನೆಯಾಗಲಿರುವ ಈ ಮಸೂದೆಗೂ ಬರಬಾರದು. ಇದಕ್ಕಾಗಿ ಬಿಜೆಪಿಯ ರಾಜ್ಯ ಘಟಕದ ಮುಖಂಡರು ಕೇಂದ್ರದ ಮೇಲೆ ಒತ್ತಡ ಹೇರಬೇಕು ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT