ಶಬರಿಮಲೆ: ಕಾಣಿಕೆ ನೀಡಿದ್ದ ಚಿನ್ನ, ಬೆಳ್ಳಿ ನಾಪತ್ತೆ– ಇಂದು ಪರಿಶೀಲನೆ

ಮಂಗಳವಾರ, ಜೂನ್ 18, 2019
29 °C

ಶಬರಿಮಲೆ: ಕಾಣಿಕೆ ನೀಡಿದ್ದ ಚಿನ್ನ, ಬೆಳ್ಳಿ ನಾಪತ್ತೆ– ಇಂದು ಪರಿಶೀಲನೆ

Published:
Updated:

ತಿರುವನಂತಪುರ: ಶಬರಿಮಲೆಯ ಅಯ್ಯಪ್ಪ ದೇವಸ್ಥಾನಕ್ಕೆ ಭಕ್ತರು ಕಾಣಿಕೆ ರೂಪದಲ್ಲಿ ನೀಡಿರುವ ಚಿನ್ನ ಮತ್ತು ಬೆಳ್ಳಿ ನಾಪತ್ತೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ದೇವಸ್ಥಾನದ ಸ್ಟ್ರಾಂಗ್‌ರೂಂನಲ್ಲಿರುವ ದಾಖಲೆಗಳು ಹಾಗೂ ವಸ್ತುಗಳ ಲೆಕ್ಕಪರಿಶೋಧನಾ ಕಾರ್ಯ ಮೇ 27ರಂದು ನಡೆಸಲು ನಿರ್ಧರಿಸಲಾಗಿದೆ.

ಈ ಬಗ್ಗೆ ದೂರುಗಳು ಕೇಳಿಬಂದ ಕಾರಣ ಲೆಕ್ಕಪರಿಶೋಧನೆ ನಡೆಸುವಂತೆ ಕೇರಳ ಹೈಕೋರ್ಟ್‌ ಆದೇಶಿಸಿದೆ. ಮೊದಲ ಹಂತವಾಗಿ ಸೋಮವಾರ (ಮೇ 27) ದಾಖಲೆಗಳ ಪರಿಶೀಲನೆ ನಡೆಸಲಾಗುವುದು. ಅಗತ್ಯ ಕಂಡು ಬಂದರೆ ಸ್ಟ್ರಾಂಗ್‌ರೂಮ್‌ನಲ್ಲಿರುವ ವಸ್ತುಗಳ ಭೌತಿಕ ಪರಿಶೀಲನೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.

ದೇವಸ್ಥಾನದ ಆಡಳಿತ ಮಂಡಳಿ ಬಳಿ 40 ಕೆ.ಜಿ ಚಿನ್ನ ಹಾಗೂ 100 ಕೆ.ಜಿ ಬೆಳ್ಳಿ ಇದೆ. ಮಂಡಳಿಯ ದಾಖಲೆಗಳಲ್ಲಿರುವ ಪ್ರಮಾಣಕ್ಕೂ ಭೌತಿಕವಾಗಿ ಚಿನ್ನ–ಬೆಳ್ಳಿ ಪ್ರಮಾಣಕ್ಕೂ ತಾಳೆಯಾಗುತ್ತಿಲ್ಲ ಎಂದು ಆರೋಪಿಸಲಾಗಿದೆ.

’ನಿರಾಧಾರ‘:ಈ ನಡುವೆ, ದೇವಸ್ಥಾನದಲ್ಲಿರುವ ಚಿನ್ನ ಮತ್ತು ಬೆಳ್ಳಿ ನಾಪತ್ತೆಯಾಗಿವೆ ಎಂಬ ಆರೋಪ ನಿರಾಧಾರ ಎಂದು ದೇವಸ್ಥಾನ ನಿರ್ವಹಣೆ ಮಾಡುತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿ ಹೇಳಿದೆ.

‘ಒಂದು ಗ್ರಾಂನಷ್ಟೂ ಚಿನ್ನ ಅಥವಾ ಬೆಳ್ಳಿ ನಾಪತ್ತೆಯಾಗಿಲ್ಲ. ಕರ್ತವ್ಯಲೋಪ ಆರೋಪದ ಮೇಲೆ ಮಂಡಳಿಯ ನೌಕರನೊಬ್ಬನನ್ನು ಕೆಲಸದಿಂದ ತೆಗೆಯಲಾಗಿದೆ. ಆತನೇ ಇಂತಹ ಆಧಾರರಹಿತ ಸುದ್ದಿ ಹಬ್ಬಿಸುತ್ತಿದ್ದಾನೆ’ ಎಂದು ಮಂಡಳಿಯ ಅಧ್ಯಕ್ಷ ಎ.ಪದ್ಮಕುಮಾರ್‌ ಹೇಳಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !