ಶಬರಿಮಲೆ ತಂತ್ರಿಗಳನ್ನು ವಜಾಗೊಳಿಸುವ ಅಧಿಕಾರ ಸರ್ಕಾರಕ್ಕಿದೆ: ಸಚಿವ ಸುರೇಂದ್ರನ್

7
ಟಿಡಿಬಿ ವರದಿ ಬಳಿಕ ತಂತ್ರಿಗಳ ವಿರುದ್ಧ ಕ್ರಮ ಎಂದ ಸಚಿವ

ಶಬರಿಮಲೆ ತಂತ್ರಿಗಳನ್ನು ವಜಾಗೊಳಿಸುವ ಅಧಿಕಾರ ಸರ್ಕಾರಕ್ಕಿದೆ: ಸಚಿವ ಸುರೇಂದ್ರನ್

Published:
Updated:

ಪತ್ತನಂತಿಟ್ಟ: ಶಬರಿಮಲೆ ಅಯ್ಯಪ್ಪ ದೇಗುಲದ ತಂತ್ರಿ ಅಥವಾ ಮುಖ್ಯ ಅರ್ಚಕರನ್ನು ಅಗತ್ಯವೆನಿಸಿದಲ್ಲಿ ವಜಾಗೊಳಿಸುವ ಅಧಿಕಾರ ಸರ್ಕಾರಕ್ಕಿದೆ ಎಂದು ಕೇರಳದ ದೇವಸ್ವಂ ಸಚಿವ ಕಡಕಂಪಳ್ಳಿ ಸುರೇಂದ್ರನ್ ಹೇಳಿದ್ದಾರೆ.

ಶಬರಿಮಲೆ ತಂತ್ರಿಗಳನ್ನು ನೇಮಕ ಮಾಡಿದ್ದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ). ಹೀಗಾಗಿ ಮಂಡಳಿ ತೀರ್ಮಾನಿಸಿದರೆ ಅವರನ್ನು ವಜಾ ಮಾಡಬಹುದು ಎಂದು ಸುರೇಂದ್ರನ್ ಹೇಳಿದ್ದಾರೆ.

ಇಬ್ಬರು ಮಹಿಳೆಯರು ದೇಗುಲ ಪ್ರವೇಶಿಸಿದ ನಂತರ ಶುದ್ಧೀಕರಣಕ್ಕಾಗಿ ದೇಗುಲದ ಬಾಗಿಲು ಮುಚ್ಚಿದ್ದ ತಂತ್ರಿಗಳ ವಿರುದ್ಧ ಟಿಡಿಬಿ ವರದಿ ಸಲ್ಲಿಸಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ತಂತ್ರಿಗಳನ್ನು ಆರ್‌ಎಸ್‌ಎಸ್‌ ಆಯುಧವಾಗಿ ಬಳಸಿಕೊಂಡಿದೆ ಎಂದೂ ಅವರು ಆರೋಪಿಸಿದ್ದಾರೆ.

15 ದಿನ ಗಡುವು: ಶುದ್ಧೀಕರಣಕ್ಕಾಗಿ ದೇಗುಲದ ಬಾಗಿಲು ಮುಚ್ಚಿದ ವಿಷಯಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡುವಂತೆ ತಂತ್ರಿ ಕಂಡರಾರು ರಾಜೀವರು ಅವರಿಗೆ ದೇವಸ್ವಂ ಮಂಡಳಿ ಸೂಚಿಸಿದೆ. 15 ದಿನಗಳ ಒಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ದೇವಸ್ವಂ ಮಂಡಳಿ ಅಧ್ಯಕ್ಷ ಪದ್ಮಕುಮಾರ್ ಸೂಚಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !