ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದಿಂದ ನೆರವು ಕೇಳಿದ ಟಿಡಿಬಿ

ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಕಡಿಮೆಯಾದ ಹುಂಡಿ ಹಣ
Last Updated 30 ಜನವರಿ 2019, 18:52 IST
ಅಕ್ಷರ ಗಾತ್ರ

ತಿರುವನಂತಪು: ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ನಡೆದ ಮಂಡಲ ಮಕರ ಪೂಜೆ ಸಂದರ್ಭದಲ್ಲಿ ಆದಾಯ ಕಡಿಮೆಯಾದ ಕಾರಣ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ರಾಜ್ಯ ಸರ್ಕಾರದಿಂದ ಆರ್ಥಿಕ ನೆರವು ಕೋರಿದೆ.

ದೇವಾಲಯದ ಅಭಿವೃದ್ಧಿಗೆ ಕನಿಷ್ಠ ₹250 ಕೋಟಿಯನ್ನಾದರೂ ಸರ್ಕಾರ ಗುರುವಾರ ಮಂಡಿಸಲಿರುವ ಬಜೆಟ್‌ನಲ್ಲಿ ಮೀಸಲಿಡುವ ವಿಶ್ವಾಸ ಇದೆ ಎಂದು ಮಂಡಳಿಯ ಮೂಲಗಳು ಹೇಳಿವೆ.

ಮಹಿಳೆಯರ ದೇಗುಲ ಪ್ರವೇಶ ವಿವಾದ ಹಿನ್ನೆಲೆಯಲ್ಲಿ ಬಲಪಂಥೀಯ ಹೋರಾಟಗಾರರು ಇತ್ತೀಚೆಗೆ ನಡೆಸಿದ ಭಾರೀ ಪ್ರತಿಭಟನೆಗಳು ಮತ್ತು ನೆರೆ ಹಾವಳಿಯಿಂದಾಗಿ ದೇವಾಲಯದ ಹುಂಡಿ ಸಂಗ್ರಹ ಮತ್ತು ಪ್ರಸಾದ ಮಾರಾಟದಿಂದ ಈ ವರ್ಷ ಬರಬೇಕಿದ್ದ ಆದಾಯದಲ್ಲಿ ₹ 100 ಕೋಟಿ ಕೋತಾ ಆಗಿದೆ ಎಂದು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT