ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬರಿಮಲೆಯಲ್ಲಿ ಬಿಜೆಪಿ ನಡೆಸುತ್ತಿದ್ದ 49 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯ

Last Updated 20 ಜನವರಿ 2019, 11:26 IST
ಅಕ್ಷರ ಗಾತ್ರ

ತಿರುವನಂತಪುರಂ:ಶಬರಿಮಲೆ ಸಂಪ್ರದಾಯಗಳನ್ನು ರಕ್ಷಿಸಿ ಎಂಬ ಬೇಡಿಕೆಯೊಡ್ಡಿಕೇರಳದ ಸಚಿವಾಲಯದ ಮುಂದೆ ಬಿಜೆಪಿ ನಡೆಸುತ್ತಿದ್ದ 49 ದಿನಗಳಉಪವಾಸ ಸತ್ಯಾಗ್ರಹಅಂತ್ಯಗೊಂಡಿದೆ. ಕಳೆದ ಮೂರು ದಿನಗಳಿಂದ ಉಪವಾಸ ಕೈಗೊಂಡಿದ್ದ ಬಿಜೆಪಿ ರಾಷ್ಟ್ರೀಯ ನಿರ್ವಾಹಕ ಸಮಿತಿ ಸದಸ್ಯ ಪಿ.ಕೆ ಕೃಷ್ಣದಾಸ್ ಅವರಿಗೆ ಗೋಪಿನಾಥ್ ನಾಯರ್ ಮತ್ತು ಅಯ್ಯಪ್ಪ ಪಿಳ್ಳೈನಿಂಬೆ ಶರಬತ್ತು ನೀಡಿ ಉಪವಾಸ ಮುಕ್ತಾಯಗೊಳಿಸಿದ್ದಾರೆ.

ಉಪವಾಸ ಸತ್ಯಾಗ್ರಹದಸಮಾರೋಪ ಸಮಾರಂಭದಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ಪಿ.ಎಸ್ ಶ್ರೀಧರನ್ ಪಿಳ್ಳೈ, ಶಾಸಕ ಒ.ರಾಜಗೋಪಾಲ್, ಆರ್‌ಎಸ್‍ಎಸ್ ಪ್ರಾಂತ್ಯಕಾರ್ಯವಾಹಕ್ ಗೋಪಾಲನ್ ಕುಟ್ಟಿ ಮಾಸ್ಟರ್ ಮೊದಲಾದವರು ಭಾಗವಹಿಸಿದ್ದರು. ಇಲ್ಲಿಯವರೆಗೆ ಉಪವಾಸ ಕೈಗೊಂಡಿದ್ದ ನೇತಾರರನ್ನು ಸಮಾರಂಭದಲ್ಲಿ ಗೌರವಿಸಲಾಗಿದೆ.

ಶಬರಿಮಲೆಯಲ್ಲಿನ ಸಂಪ್ರದಾಯಗಳನ್ನು ರಕ್ಷಿಸಿ, ಶಬರಿಮಲೆಯಲ್ಲಿರುವ ನಿಷೇಧಾಜ್ಞೆ ಹಿಂತೆಗೆಯಬೇಕು, ನಾಯಕರು ಮತ್ತು ಕಾರ್ಯಕರ್ತರ ಮೇಲಿರುವ ಆರೋಪಗಳನ್ನು ಹಿಂಪಡೆಯಬೇಕು ಮೊದಲಾದ ಬೇಡಿಕೆಯೊಡ್ಡಿ ಬಿಜೆಪಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿತ್ತು.ಆದರೆ ಸರ್ಕಾರ ಬಿಜೆಪಿ ಜತೆ ಚರ್ಚೆ ನಡೆಸುವುದಾಗಲೀ, ಅವರ ಬೇಡಿಕೆಗಳನ್ನು ಆಲಿಸಿಕೊಳ್ಳುವುದಾಗಲೀ ಮಾಡಲಿಲ್ಲ.

ಹೋರಾಟ ಇಲ್ಲಿಗೆ ಮುಗಿದಿಲ್ಲ
ಶಬರಿಮಲೆ ವಿಷಯದಲ್ಲಿ ಹೋರಾಟಇಲ್ಲಿಗೆ ಮುಗಿದಿಲ್ಲ. ಮುಂದಿನ ಹಂತದ ಚಳವಳಿ ಆರಂಭಿಸಲು ನಾವು ತೀರ್ಮಾನಿಸಿದ್ದು, ಈ ಬಗ್ಗೆ ಮುಂದಿನ ವಾರಗಳಲ್ಲಿ ನಾವು ಜನರೊಂದಿಗೆ ಸಂವಾದ ನಡೆಸಲಿದ್ದೇವೆ ಎಂದು ಪಿ.ಎಸ್ ಶ್ರೀಧರನ್ ಪಿಳ್ಳೈ ಹೇಳಿದ್ದಾರೆ.

ನಾಮ ಜಪ ಯಾತ್ರೆ ಆರಂಭ, ಅಯ್ಯಪ್ಪ ಸಂಗಮ


ತಿರುವನಂತಪುರಂ: ಶಬರಿಮಲೆ ಕರ್ಮ ಸಮಿತ ನೇತೃತ್ವದಲ್ಲಿ ಅಯ್ಯಪ್ಪ ಭಕ್ತ ಸಂಗಮ ಭಾನುವಾರ ಆರಂಭವಾಗಿದೆ. ತಿರುವನಂತಪುರಂನ ಪುತ್ತರಿಕಂಡ ಮೈದಾನದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಕೋಟ್ಟಯಂ, ಪತ್ತನಂತಿಟ್ಟ, ಕೊಲ್ಲಂ, ತಿರುವನಂತಪುರಂ ಜಿಲ್ಲೆಗಳಿಂದ ಸರಿ ಸುಮಾರು ಎರಡೂವರೆ ಲಕ್ಷ ಮಂದಿ ಈ ಸಂಗಮದಲ್ಲಿ ಭಾಗವಹಿಸಲಿದ್ದಾರೆ ಎಂದು ಆಯೋಜರು ಹೇಳಿದ್ದಾರೆ.

ಮ್ಯೂಸಿಯಂ.ಪಿ.ಎಂ.ಜಿ ಮೊದಲಾದೆಡೆಯಿಂದ ಆರಂಭವಾದ ನಾಮಜಪ ಘೋಷಯಾತ್ರೆ ಪುತ್ತರಿಕಂಡದಲ್ಲಿ ಕೊನೆಗೊಳ್ಳಲಿದೆ,
ಕುಳತ್ತೂರ್ ಅದ್ವೈತಾಶ್ರಮ ಮಠಾಧಿಪತಿ ಸ್ವಾಮಿ ಚಿದಾನಂದಪುರಿ ಅವರ ಅಧ್ಯಕ್ಷತೆಯಲ್ಲಿ ಮಾತಾ ಅಮೃತಾನಂದಮಯಿ ಈ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಹಿಂದೂ ಐಕ್ಯವೇದಿ ಅಧ್ಯಕ್ಷೆ ಕೆ.ಪಿ.ಶಶಿಕಲಾ ಪ್ರಧಾನ ಭಾಷಣ ಮಾಡಲಿದ್ದಾರೆ.

ಶಬರಿಮಲೆ ತೀರ್ಥಯಾತ್ರೆ ಮುಕ್ತಾಯ
67 ದಿನಗಳ ತೀರ್ಥಯಾತ್ರೆಗೆ ಕೊನೆ ಹಾಡಿ ಭಾನುವಾರ ಶಬರಿಮಲೆ ಬಾಗಿಲು ಮುಚ್ಚಿದೆ. ಭಾನುವಾರ ಬೆಳಗ್ಗೆ 5 ಗಂಟೆಗೆ ಬಾಗಿಲು ತೆರೆದು ಪೂಜೆ ಮುಗಿಸಿದ ನಂತರ ತಿರುನಾಭರಣ ವಾಪಸ್ ತೆಗೆದುಕೊಂಡು ಹೋಗಲಾಗಿದೆ. ಶಬರಿಮಲೆ ಪ್ರಧಾನ ಅರ್ಚಕ ಕಂಠರರ್‌ ರಾಜೀವರು ಅವರ ನೇತೃತ್ವದಲ್ಲಿ ಅಷ್ಟದ್ರವ್ಯ ಮಹಾಗಣಪತಿ ಹೋಮ ನಡೆದ ನಂತರ ತಿರುವಾಭರಣವನ್ನು ವಾಪಸ್ ಕೊಂಡೊಯ್ಯಲಾಗಿದೆ.ತಿರುವಾಭರಣ ವಾಪಸ್ ಕೊಂಡೊಯ್ಯುವ ಯಾತ್ರೆ 23ರಂದು ಪಂದಳಂ ತಲುಪಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT