ಶಬರಿಮಲೆ: ಬಿಜೆಪಿ ಯುವಮೋರ್ಚಾ ಕಾರ್ಯಕರ್ತರಿಂದ ಮುಂದುವರಿದ ಪ್ರೆತಿಭಟನೆ

6

ಶಬರಿಮಲೆ: ಬಿಜೆಪಿ ಯುವಮೋರ್ಚಾ ಕಾರ್ಯಕರ್ತರಿಂದ ಮುಂದುವರಿದ ಪ್ರೆತಿಭಟನೆ

Published:
Updated:
Deccan Herald

ತಿರುವನಂತಪುರ: ಎಲ್ಲ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಿರುವ ಸುಪ್ರೀಂ ಕೋರ್ಟ್‌ ಆದೇಶವನ್ನು ಜಾರಿಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರದ ತೀರ್ಮಾನ ಇದೀಗ ಕೇರಳದಲ್ಲಿ ರಾಜಕೀಯ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ.

‘ಸುಪ್ರೀಂಕೋರ್ಟ್‌ ಖಂಡಿಸಿ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಗುರುವಾರ ಕೇರಳ ದೇವಸ್ವಂ ಬೋರ್ಡ್‌ ಕಡಗಂಪಳ್ಳಿ ಸುರೇಂದ್ರನ್‌ ಮನೆಗೆ ನುಗ್ಗಲು ಯತ್ನಿಸಿದರು. ಈ ವೇಳೆ ಪ್ರತಿಭಟನಾಕಾರರ ಮೇಲೆ, ಪೊಲೀಸರು ಜಲಫಿರಂಗಿ, ಆಶ್ರುವಾಯು ಪ್ರಯೋಗಿಸಿ ಗುಂಪು ಚದುರಿಸಲು ಮುಂದಾದರು.

ಇದರಿಂದ ಸಿಟ್ಟಿಗೆದ್ದ ಕಾರ್ಯಕರ್ತರು ಬ್ಯಾರಿಕೇಡ್‌ಗಳನ್ನು ಮುರಿದು ಒಳನುಗ್ಗಲು ಮುಂದಾದರು. ಈ ವೇಳೆ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.

ಸರ್ಕಾರದ ಅಸ್ಥಿರತೆಗೆ ಯತ್ನ: ‘ಶಬರಿಮಲೆ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ಮತ್ತು ಕಾಂಗ್ರೆಸ್‌  ಪಕ್ಷ, ರಾಜ್ಯದ ಎಲ್‌ಡಿಎಫ್‌ ನೇತೃತ್ವದ ಸರ್ಕಾರವನ್ನು ಅಸ್ಥಿರಗೊಳಿಸಲು ಮುಂದಾಗುತ್ತಿದೆ’ ಎಂದು ಪಕ್ಷದ ಹಿರಿಯ ನಾಯಕ ಎ.ವಿಜಯರಾಘವನ್‌  ಆರೋಪಿಸಿದ್ದಾರೆ.

‘ಮುಖ್ಯಮಂತ್ರಿಗೆ ಅವಮಾನಿಸುವುದು, ದೇವಸ್ವಂ ಕಚೇರಿಗಳ ಮೇಲೆ ದಾಳಿ ನಡೆಸಿ ಸಮಸ್ಯೆ ಉಂಟುಮಾಡಲಾಗುತ್ತಿದೆ. ಕಳೆದ ತಿಂಗಳು ರಾಜ್ಯದಲ್ಲಿ ಸಂಭವಿಸಿದ ಪ್ರವಾಹದ ಬಳಿಕ ಸರ್ಕಾರ ಕೈಗೊಂಡಿರುವ ಪರಿಹಾರ ಕಾರ್ಯಗಳಿಗೆ ತಡೆಒಡ್ಡಲಾಗುತ್ತಿದೆ’ ಎಂದು ದೂರಿದರು.

ಸಾರ್ವಜನಿಕ ಸಭೆ: ವಿರೋಧ ಪಕ್ಷಗಳು ನಡೆಸುತ್ತಿರುವ ‘ಸುಳ್ಳು ಪ್ರಚಾರ’ದ ವಿರುದ್ಧ ಜನರಿಗೆ ಸರ್ಕಾರದ ನಿಲುವು ತಿಳಿಸಲು ರಾಜ್ಯದ 14 ಜಿಲ್ಲೆಗಳಲ್ಲಿ ಸಾರ್ವಜನಿಕ ಸಭೆ ನಡೆಸಲು ಆಡಳಿತರೂಢ ಎಲ್‌ಡಿಎಫ್‌ ನಿರ್ಧರಿಸಿದೆ. ಅಕ್ಟೋಬರ್‌ 16ರಂದು ಪತ್ತನಂತಿಟ್ಟ, ಅಕ್ಟೋಬರ್‌ 23 ಹಾಗೂ 24ರಂದು ಕೊಲ್ಲಂನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಭಾಗವಹಿಸಲಿದ್ದಾರೆ’  ಎಂದು ಅವರು ತಿಳಿಸಿದರು.

ತೀರ್ಪು ಜಾರಿಗೆ ಬದ್ಧ: ‘ಸುಪ್ರೀಂಕೋರ್ಟ್‌ ನೀಡಿರುವ ತೀರ್ಪನ್ನು ರಾಜ್ಯ ಸರ್ಕಾರ ತಿರಸ್ಕರಿಸುವುದಿಲ್ಲ, ಈಗಿರುವ ತೀರ್ಪಿನಂತೆ ಜಾರಿಮಾಡಲಾಗುವುದು’ ಎಂದು ವಿಜಯರಾಘವನ್‌ ಸ್ಪಷ್ಟಪಡಿಸಿದರು.

‘ಮಸೀದಿಗಳಲ್ಲಿ ಪ್ರಾರ್ಥನೆಗೆ ಅವಕಾಶ ನೀಡಿ’

‘ದೇಶದಲ್ಲಿರುವ ಎಲ್ಲ ಮಸೀದಿಗಳಲ್ಲಿ ಮಹಿಳೆಯರಿಗೂ ಪ್ರಾರ್ಥನೆಗೆ ಅವಕಾಶ ನೀಡಬೇಕು’ ಎಂದು ಕೋರಿ ಕೇರಳ ಮೂಲದ ಮುಸ್ಲಿಂ ಸಂಘಟನೆಯೊಂದು ಸುಪ್ರೀಂಕೋರ್ಟ್‌ ಕದತಟ್ಟಲು ಮುಂದಾಗಿದೆ. ಶಬರಿಮಲೆ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪಿನಿಂದ ಸ್ಫೂರ್ತಿ ಪಡೆದು ಈ ತೀರ್ಮಾನಕ್ಕೆ ಬಂದಿದೆ.

‘ಇಮಾಮ್‌’ಗಳ ನೇಮಕ ಹಾಗೂ ಮಹಿಳೆಯರಿಗೂ ಪ್ರಾರ್ಥನೆಗೆ ಅವಕಾಶ ನೀಡಬೇಕು ಎಂದು ಕೋರಿ ಪ್ರಗತಿಪರ ಮುಸ್ಲಿಂ ಮಹಿಳಾ ಸಂಘಟನೆ ‘ನಿಸಾ’ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲು ಮುಂದಾಗಿದೆ.

ಇಸ್ಲಾಂನಲ್ಲಿ ಲಿಂಗ ಸಮಾನತೆಗೆ ಆಗ್ರಹಿಸಿ, ಬಹುಪತ್ನಿತ್ವ ವಿರೋಧಿಸಿ ಈ ಸಂಘಟನೆ ಕೆಲಸ ಮಾಡುತ್ತಿದೆ. 

‘ಮಹಿಳೆಯರು ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸದಂತೆ ವಿರೋಧಿಸಿರುವ ಬಗ್ಗೆ ಪ್ರವಾದಿ ಮೊಹಮ್ಮದರು ಹಾಗೂ ಪವಿತ್ರ ಕುರಾನ್‌ನಲ್ಲಿ ಎಲ್ಲಿಯೂ ದಾಖಲೆ ಇಲ್ಲ’ ಎಂದು ಸಂಘಟನೆಯ ಅಧ್ಯಕ್ಷೆ ವಿ.ಪಿ.ಜುಹ್ರಾ ತಿಳಿಸಿದರು.

‘ಈ ವಿಚಾರಕ್ಕೆ ಸಂಬಂಧಿಸಿದಂತೆ ವಕೀಲರ ಜೊತೆ ಚರ್ಚಿಸಿ ಆದಷ್ಟು ಬೇಗ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗುವುದು’ ಎಂದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !