ಸೋಮವಾರ, ಜುಲೈ 26, 2021
26 °C

ಕಾಂಗ್ರೆಸ್ ವಕ್ತಾರ ಹುದ್ದೆಯಿಂದ ಸಂಜಯ್ ಝಾ ಹೊರಕ್ಕೆ: ಸಹಿಷ್ಣುತೆ ಎಲ್ಲಿ ಹೋಯಿತು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಜಯ್ ಝಾ

ನವದೆಹಲಿ: ಪಕ್ಷದ ನೀತಿಗಳನ್ನು ಟೀಕಿಸಿ ಪತ್ರಿಕೆಯೊಂದರಲ್ಲಿ ಲೇಖನ ಬರೆದಿದ್ದ ಸಂಜಯ್ ಝಾ ಅವರನ್ನು ವಕ್ತಾರ ಹುದ್ದೆಯಿಂದ ಕಾಂಗ್ರೆಸ್ ತೆಗೆದುಹಾಕಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬುಧವಾರ ರಾತ್ರಿ ಈ ನಿರ್ಧಾರ ತೆಗೆದುಕೊಂಡಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದ್ದಾರೆ. 

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಝಾ, ಪಕ್ಷ ತನ್ನ ಆಂತರಿಕ ಮೌಲ್ಯಗಳು ಹಾಗೂ ಸಹಿಷ್ಣತೆಯಿಂದ ಏಕೆ ದೂರ ಸರಿಯಿತು ಎಂದು ಪ್ರಶ್ನಿಸಿದ್ದಾರೆ.  

‘ನಿರಂಕುಶಾಧಿಕಾರಿಯಾಗುವುದರ ವಿರುದ್ಧ ಎಚ್ಚರಿಕೆ ನೀಡಿ ಪಂಡಿತ್ ನೆಹರು ಅವರು ಒಮ್ಮೆ ಪತ್ರಿಕೆಯೊಂದರಲ್ಲಿ ಸ್ವಯಂ ವಿಮರ್ಶಾತ್ಮಕ ಬರಹ ಬರೆದಿದ್ದರು’ ಎಂದು ಝಾ ನೆನಪಿಸಿದ್ದಾರೆ. ‘ಅದು ನಿಜವಾದ ಕಾಂಗ್ರೆಸ್. ಅಲ್ಲಿ ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ಸಹಿಷ್ಣುತೆ ಹಾಗೂ ಒಳಗೊಳ್ಳುವಿಕೆ ಇದ್ದವು. ನಾವು ಈ ಮೌಲ್ಯಗಳಿಂದ ದೂರ ಸರಿಯುತ್ತಿದ್ದೇವೆ. ಏಕೆ’ ಎಂದು ಅವರು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ. 

ಏನೇ ಆದರೂ, ತಾವು ಕಾಂಗ್ರೆಸ್‌ನ ಬದ್ಧ, ಸೈದ್ಧಾಂತಿಕ ವ್ಯಕ್ತಿಯಾಗಿ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದ್ದಾರೆ.

‘ಎರಡು ಲೋಕಸಭೆ ಹಾಗೂ ಹಲವು ವಿಧಾನಸಭಾ ಚುನಾವಣೆಗಳಲ್ಲಿ ಭಾರಿ ಹಿನ್ನಡೆ ಅನುಭವಿಸಿದ್ದರೂ, ಪಕ್ಷ ಮೇಲೇಳಲು ಮತ್ತು ತುರ್ತು ಪ್ರಜ್ಞೆಯೊಂದಿಗೆ ಕೆಲಸ ಮಾಡಲು ಯಾವುದೇ ಗಂಭೀರ ಪ್ರಯತ್ನಗಳು ನಡೆದಿಲ್ಲ’ ಎಂದು ಸಂಜಯ್ ಝಾ ಲೇಖನದಲ್ಲಿ ಉಲ್ಲೇಖಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು