ಭಾನುವಾರ, ಏಪ್ರಿಲ್ 11, 2021
22 °C

ಬಿಜೆಪಿ ಸೇರಿದ 'ಬಿಗ್ ಬಾಸ್' ಖ್ಯಾತಿಯ ಸಪ್ನಾ ಚೌಧರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಹರಿಯಾಣ್ವಿ ಗಾಯಕಿ, ನರ್ತಕಿ ಬಿಗ್ ಬಾಸ್ ಖ್ಯಾತಿಯ ಸಪ್ನಾ ಚೌಧರಿ ಬಿಜೆಪಿ ಸೇರಿದ್ದಾರೆ. ದೆಹಲಿ ಬಿಜೆಪಿ ಘಟಕದ ಮುಖ್ಯಸ್ಥ ಮನೋಜ್ ತಿವಾರಿ ಉಪಸ್ಥಿತಿಯಲ್ಲಿ ಜವಾಹರ್‌ಲಾಲ್ ನೆಹರು ಸ್ಟೇಡಿಯಂನಲ್ಲಿ ನಡೆದ ಪಕ್ಷದ ಸದಸ್ಯತ್ವ ಅಭಿಯಾನದಲ್ಲಿ ಸಪ್ನಾ ಬಿಜೆಪಿ ಸದಸ್ಯತ್ವ ಸ್ವೀಕರಿಸಿದ್ದಾರೆ.

 ಈ ಬಗ್ಗೆ ಎರಡು ಬಾರಿ ಯೋಚಿಸುವ ಅಗತ್ಯವೇ ಇಲ್ಲ. ನಾನು ಬಿಜೆಪಿಯ ಕೆಲಸವನ್ನು ಮೆಚ್ಚಿದ್ದೇನೆ. ಬಿಜೆಪಿ ಉತ್ತಮ ಪಕ್ಷ, ನಾನು ಅದರ ಸದಸ್ಯತ್ವ ಪಡೆದಿದ್ದೇನೆ ಎಂದು ಸಪ್ನಾ ಹೇಳಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಬಿಜೆಪಿ ಸದಸ್ಯತ್ವ ಅಭಿಯಾನದ ವೇಳೆ ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಲಾಲ್ ಉಪಸ್ಥಿತರಿದ್ದರು.

ಲೋಕಸಭಾ ಚುನಾವಣೆ ವೇಳೆ ಸಪ್ನಾ, ಮನೋಜ್ ತಿವಾರಿ ಪರ ಚುನಾವಣಾ ಪ್ರಚಾರ ನಡೆಸಿದ್ದರು.ಮನೋಜ್ ತಿವಾರಿ ನನ್ನ ಒಳ್ಳೆಯ ಗೆಳೆಯ ಎಂದಿದ್ದರು ಸಪ್ನಾ.

ಮಾರ್ಚ್ ತಿಂಗಳಲ್ಲಿ ಉತ್ತರ ಪ್ರದೇಶದ ಕಾಂಗ್ರೆಸ್ ಮುಖ್ಯಸ್ಥ ರಾಜ್ ಬಬ್ಬರ್ ಅವರು ಸಪ್ನಾ ಚೌಧರಿ ಮತ್ತು ಪ್ರಿಯಾಂಕಾ ಗಾಂಧಿ ಜತೆಗಿರುವ ಫೋಟೊವೊಂದನ್ನು ಟ್ವೀಟ್ ಮಾಡಿದ್ದರು. ಸಪ್ನಾ ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿ ಹಬ್ಬಿದ್ದರೂ ಮನೋಜ್ ತಿವಾರಿ ಅವರ ಚುನಾವಣಾ ಪ್ರಚಾರದಲ್ಲಿ ಭಾಗಿಯಾದೊಡನೆ ಸಪ್ನಾ ಬಿಜೆಪಿ ಸೇರುವುದು ಖಚಿತವಾಗಿತ್ತು.
 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು