ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಐ ಮಾಹಿತಿ ‘ಗಂಭೀರ ಸ್ವರೂಪದ್ದು’: ಸುಪ್ರೀಂಕೋರ್ಟ್‌

ಶಾರದಾಚಿಟ್‌ ಫಂಡ್‌ ಹಗರಣ
Last Updated 26 ಮಾರ್ಚ್ 2019, 18:43 IST
ಅಕ್ಷರ ಗಾತ್ರ

ನವದೆಹಲಿ: ಶಾರದಾ ಚಿಟ್‌ ಫಂಡ್‌ ಹಗರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತ ಪೊಲೀಸ್‌ ಆಯುಕ್ತ ರಾಜೀವ್‌ ಕುಮಾರ್‌ ಅವರನ್ನು ಸಿಬಿಐ ತನಿಖೆಗೆ ಒಳಪಡಿಸಿದ ಬಳಿಕ ಸಲ್ಲಿಸಿರುವ ವರದಿಯ ಮಾಹಿತಿಯು ’ಗಂಭೀರ ಸ್ವರೂಪದ್ದು‘ ಎಂದು ಸುಪ್ರೀಂಕೋರ್ಟ್‌ ಅಭಿಪ್ರಾಯಪಟ್ಟಿದೆ.

’ಸಿಬಿಐ ಹೊಸದಾಗಿ ಸಲ್ಲಿಸಿರುವ ವರದಿಯಲ್ಲಿ’ ಅತ್ಯಂತ ಗಂಭೀರ ಸ್ವರೂಪದ ಮಾಹಿತಿ‘ಗಳಿವೆ, ಈ ಕಾರಣದಿಂದ ಕಣ್ಣುಮುಚ್ಚಿ ಕೂರಲು ಸಾಧ್ಯವಿಲ್ಲ‘ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ನ್ಯಾಯಪೀಠ ತಿಳಿಸಿದೆ.

ಚಿಟ್‌ಫಂಡ್‌ ಹಗರಣದ ತನಿಖೆ ನಡೆಸಿದ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿ (ಎಸ್‌ಐಟಿ) ರಾಜೀವ್‌ ಕುಮಾರ್‌ ಅವರು ನೇತೃತ್ವ ವಹಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿರುವ ಕಡತಗಳು ಹಾಗೂ ದಾಖಲೆಗಳ ವಿವರ ಪಡೆಯಲು ರಾಜೀವ್‌ಕುಮಾರ್‌ ಅವರನ್ನು ಸಿಬಿಐ ವಿಚಾರಣೆಗೆ ಒಳಪಡಿಸಿತ್ತು. ವಿಚಾರಣಾ ವರದಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT