ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ ತೀರ್ಪು: ವಿವಾದಿತ ಸ್ಥಳದಲ್ಲಿ ಆಸ್ಪತ್ರೆ ನಿರ್ಮಿಸಬಹುದಿತ್ತು

Last Updated 10 ನವೆಂಬರ್ 2019, 20:09 IST
ಅಕ್ಷರ ಗಾತ್ರ

ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಾರ್ಹವಾದರೂ, ವಿವಾದಿತ ಸ್ಥಳದಲ್ಲಿ ಸುಸಜ್ಜಿತ ಆಸ್ಪತ್ರೆಯನ್ನೋ, ಸರ್ವಧರ್ಮಗಳಿಗೂ ಅನ್ವಯವಾಗುವಂತಹಅರ್ಥಪೂರ್ಣ ಸ್ಮಾರಕ ನಿರ್ಮಿಸುವುದಕ್ಕೆ ಅವಕಾಶ ನೀಡಬಹುದಿತ್ತು. ಅಯೋಧ್ಯೆಯಲ್ಲೇ ಸುನ್ನಿ ವಕ್ಫ್‌ ಬೋರ್ಡ್‌ಗೆ 5 ಎಕರೆ ಜಮೀನು ಕೊಟ್ಟಂತೆ ಹಿಂದೂಗಳಿಗೆ ಸಹ 5 ಎಕರೆ ನಿವೇಶನ ಕೊಡಿಸಿ ಎರಡೂ ಧರ್ಮದವರ ಪ್ರಾರ್ಥನಾ ಮಂದಿರಕ್ಕೆ ಅವಕಾಶ ಮಾಡಿಕೊಡಬಹುದಿತ್ತು.

ದೇಶದ ಭದ್ರತೆ ವಿಚಾರ ಬಂದಾಗ ವೈಯಕ್ತಿಕ ಸ್ವಾತಂತ್ರ್ಯವನ್ನು ಮೊಟಕುಗೊಳಿಸಬಹುದುಎಂದು ಸಂವಿಧಾನ ಹೇಳುತ್ತದೆ. ನಮ್ಮ ದೇಶದ ಜಾತ್ಯತೀತ ವ್ಯವಸ್ಥೆಯಲ್ಲಿ ಬಹುಸಂಖ್ಯಾತರನ್ನು ಸಮಾಧಾನಪಡಿ ಸುವ ನಿಟ್ಟಿನಲ್ಲಿ ಈ ತೀರ್ಪು ಬಂದಿರಬಹುದು. ನಿಜವಾಗಿಯೂ 5 ಎಕರೆ ಜಾಗ ಕೊಡಿ ಎಂದು ಹೇಳುವ ಅಧಿಕಾರ ಸುಪ್ರೀಂ ಕೋರ್ಟ್‌ಗೆ ಇರಲಿಲ್ಲ. ಆದರೂ ಭಾವನಾತ್ಮಕ ವಿಚಾರವನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಲು ನ್ಯಾಯಾಲಯ ಹೆಚ್ಚುವರಿ ಅಧಿಕಾರ ಬಳಸಿಕೊಂಡು ಈ ತೀರ್ಪು ನೀಡಿದೆ.
–ಡಾ.ಎನ್‌.ಸತೀಶ್‌ ಗೌಡ,ಪ್ರಾಧ್ಯಾಪಕ, ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಕಾಲೇಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT