ಗುರುವಾರ , ನವೆಂಬರ್ 21, 2019
21 °C

ಜನರ ಜೀವ ಉಳಿಸಲು ಫೋನ್ ಸಂಪರ್ಕ ಸ್ಥಗಿತಗೊಳಿಸಿದ್ದೆವು: ಸತ್ಯಪಾಲ್ ಮಲಿಕ್

Published:
Updated:
Jammu and Kashmir Governor Satya Pal Malik

 ಶ್ರೀನಗರ: ಕಾಶ್ಮೀರದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ಜೀವ ಮುಖ್ಯ. ಅಲ್ಲಿನ ಜನರ ಜೀವ ಉಳಿಸುವುದಕ್ಕಾಗಿ ಫೋನ್ ಸಂಪರ್ಕ ಸ್ಥಗಿತಗೊಳಿಸಲಾಗಿತ್ತು ಎಂದು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ.

ಆಗಸ್ಟ್ 5ರಂದು ಸಂವಿಧಾನ 370ನೇ ವಿಧಿ ರದ್ದು ಮಾಡುವ ನಿರ್ಧಾರವನ್ನು ಕೇಂದ್ರ ಸರ್ಕಾರ  ಕೈಗೊಂಡಾಗ ಜಮ್ಮು ಮತ್ತು ಕಾಶ್ಮೀರದಲ್ಲಿ ಮೊಬೈಲ್ ಸೇವೆಯನ್ನು ಸರ್ಕಾರ ಸ್ಥಗಿತಗೊಳಿಸಲಾಗಿತ್ತು. ಇದಾಗಿ 70 ದಿನಗಳ ನಂತರ ಇಲ್ಲಿ ಸೋಮವಾರ ಮಧ್ಯಾಹ್ನದಿಂದ  ಬಿಎಸ್‌ಎನ್‌ಎಲ್ ಸೇರಿದಂತೆ ಎಲ್ಲ ನೆಟ್‌ವರ್ಕ್‌ಗಳ ಪೋಸ್ಟ್‌ಪೇಯ್ಡ್‌ ಮೊಬೈಲ್‌ ಕಾರ್ಯಾರಂಭಿಸಿವೆ.

ಇದನ್ನೂ ಓದಿಜಮ್ಮು–ಕಾಶ್ಮೀರ: 70 ದಿನದ ಬಳಿಕ ಪೋಸ್ಟ್‌ಪೇಯ್ಡ್‌ ಮೊಬೈಲ್‌ ಸೇವೆ ಶುರು

ಕಾಶ್ಮೀರದಲ್ಲಿ ಮೊಬೈಲ್ ಫೋನ್ ಸಂಪರ್ಕ ಸ್ಥಗಿತಗೊಳಿಸಿರುವ ಸರ್ಕಾರದ ನಿರ್ಧಾರವನ್ನು  ಸಮರ್ಥಿಸಿಕೊಂಡ  ರಾಜ್ಯಪಾಲರು ಉಗ್ರ ಕೃತ್ಯಗಳನ್ನು ನಡೆಸುವುದಕ್ಕಾಗಿ ಉಗ್ರರು ಟೆಲಿಫೋನ್ ಬಳಸುತ್ತಾರೆ.  ಟೆಲಿಫೋನ್ ಸಂಪರ್ಕ ಇಲ್ಲ ಎಂದು ಜನರು  ಬೊಬ್ಬೆ ಹಾಕುತ್ತಿದ್ದಾರೆ. ಉಗ್ರ ಚಟುವಟಿಕೆಗಳಿಗೆ, ಉಪದೇಶ ನೀಡಲು ಮತ್ತು ಒಟ್ಟು ಸೇರುವುದಕ್ಕಾಗಿ ಉಗ್ರರು ಟೆಲಿಫೋನ್ ಸೇವೆ ಬಳಸುತ್ತಿದ್ದಾರೆ. ನಮಗೆ ಕಾಶ್ಮೀರದಲ್ಲಿನ ಜನರ ಪ್ರಾಣ ಮುಖ್ಯ, ಟೆಲಿಫೋನ್ ಅಲ್ಲ.  ಫೋನ್ ಇಲ್ಲದೆ ಜನರು  ಈ ಹಿಂದೆ ಬದುಕುತ್ತಿದ್ದರು ಎಂದು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಇದನ್ನೂ ಓದಿ:  ಸಂವಿಧಾನದ 370ನೇ ವಿಧಿ ಮತ್ತು ‘35–ಎ’ ಕಲಂ ಸಮಗ್ರ ಮಾಹಿತಿ

 ನಾವು ಜನರ ಪ್ರಾಣ ಉಳಿಸಿದ್ದೇವೆ. ಈಗ ಟೆಲಿಫೋನ್ ಸಂಪರ್ಕ ಪುನಃಸ್ಥಾಪಿಸಲಾಗಿದೆ. ಜನರು ಈಗ ತಮ್ಮ ಕೆಲಸಗಳನ್ನು ಮುಂದುವರಿಸಬಹುದು. ಪ್ರವಾಸಿಗರು ಇಲ್ಲಿಗೆ  ಬರಲು ಆರಂಭಿಸಿದ್ದಾರೆ. ಮೊದಲು ಯುವಕ ಯುವತಿಯರಿಗೆ ಸಮಸ್ಯೆ ಇತ್ತು ಈಗ ಅವರು ಪರಸ್ಪರ ಮಾತನಾಡಬಹುದು. ಇಲ್ಲಿ ಈಗ ಯಾವುದೇ ಸಮಸ್ಯೆ ಇಲ್ಲ. ಶೀಘ್ರದಲ್ಲೇ ಇಂಟರ್ನೆಟ್  ಸಂಪರ್ಕ ಪುನಃ ಸ್ಥಾಪಿಸಲಾಗುವುದು ಎಂದು ಮಲಿಕ್ ಹೇಳಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿವಿಪಕ್ಷಗಳಿಗೆ ಕಾಶ್ಮೀರದಲ್ಲಿ 370ನೇ ವಿಧಿ ಪುನಃಸ್ಥಾಪಿಸಲು ಸಾಧ್ಯವೇ?: ಮೋದಿ ಸವಾಲು

ಪ್ರತಿಕ್ರಿಯಿಸಿ (+)