ಕಾರಾಗೃಹ ಸುಧಾರಣಾ ಸಮಿತಿ ರಚನೆ: ಸುಪ್ರೀಂ

7

ಕಾರಾಗೃಹ ಸುಧಾರಣಾ ಸಮಿತಿ ರಚನೆ: ಸುಪ್ರೀಂ

Published:
Updated:

ನವದೆಹಲಿ (ಪಿಟಿಐ): ಕೈದಿಗಳ ದಟ್ಟಣೆ ಸೇರಿದಂತೆ ದೇಶದ ವಿವಿಧ ಕಾರಾಗೃಹಗಳ ಸಮಸ್ಯೆಗಳ ಅಧ್ಯಯನ ನಡೆಸುವ ಸಲುವಾಗಿ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮತಿಯೊಂದನ್ನು ರಚಿಸುವುದಾಗಿ ಸುಪ್ರೀಂಕೋರ್ಟ್ ಬುಧವಾರ ತಿಳಿಸಿದೆ. 

ಕಾರಾಗೃಹ ಸುಧಾರಣಾ ಸಮಿತಿಯಲ್ಲಿ ಕೇಂದ್ರ ಸರ್ಕಾರದ ಇಬ್ಬರಿಂದ ಮೂವರು ಅಧಿಕಾರಿಗಳು ಇರಲಿದ್ದಾರೆ. ಜೈಲುಗಳಲ್ಲಿ ಮಹಿಳಾ ಕೈದಿಗಳು ಎದುರಿಸುತ್ತಿರುವ ಸಮಸ್ಯೆಗಳ ಮೇಲೂ ಸಮಿತಿ ಬೆಳಕು ಚೆಲ್ಲಲಿದೆ. 

ಸಾಕಷ್ಟು ಅನುದಾನವಿದ್ದರೂ ಅದನ್ನು ಸರಿಯಾಗಿ ಬಳಸಿಕೊಂಡಿಲ್ಲ ಎಂದು ಎಂ.ಬಿ. ಲೋಕೂರ್ ನೇತೃತ್ವದ ಪೀಠವು ಅಸಮಾಧಾನ ವ್ಯಕ್ತಪಡಿಸಿತು. ನ್ಯಾಯಮೂರ್ತಿಗಳಾದ ಅಬ್ದುಲ್ ನಜೀರ್ ಹಾಗೂ ದೀಪಕ್ ಮಿಶ್ರಾ ಅವರೂ ಈ ಪೀಠದಲ್ಲಿದ್ದಾರೆ. 

ಸಮಿತಿ ರಚನೆಗೆ ಸಹಮತ ವ್ಯಕ್ತಪಡಿಸಿದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು, ದೇಶವು ಜನಸಂಖ್ಯೆ ಹೆಚ್ಚಳ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ತಿಳಿಸಿದರು. 

‘ಪ್ರತಿ ಸಮಸ್ಯೆಗೂ ಸರ್ಕಾರವನ್ನು ಟೀಕಿಸುವುದು ನ್ಯಾಯಾಲಯದ ಉದ್ದೇಶವಲ್ಲ. ಕೆಲವು ಸಮಸ್ಯೆಗಳನ್ನು ಬಗೆಹರಿಸಲು ನಾವು ಯತ್ನಿಸುತ್ತಿದ್ದೇವೆ’ ಎಂದು ನ್ಯಾಯಮೂರ್ತಿ ಲೋಕೂರ್ ಅವರು ವೇಣುಗೋಪಾಲ್ ಅವರಿಗೆ ಸ್ಪಷ್ಟಪಡಿಸಿದರು. 

ದೇಶದಾದ್ಯಂತ 1,382 ಜೈಲುಗಳಲ್ಲಿ ಅಮಾನವೀಯ ಪರಿಸ್ಥಿತಿ ಇದೆ ಎಂಬ ದೂರುಗಳ ಕುರಿತು ಕೋರ್ಟ್ ವಿಚಾರಣೆ ನಡೆಸುತ್ತಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !