ಶನಿವಾರ, ನವೆಂಬರ್ 16, 2019
21 °C

ಅಕ್ಟೋಬರ್‌ 1ರಿಂದ ಶಾಶ್ವತ ಸಂವಿಧಾನ ಪೀಠ ಅಸ್ತಿತ್ವಕ್ಕೆ

Published:
Updated:

ನವದೆಹಲಿ: ಸುಪ್ರೀಂ ಕೋರ್ಟ್‌ನಲ್ಲಿ ಅಕ್ಟೋಬರ್‌ 1ರಿಂದ ಶಾಶ್ವತ ಸಂವಿಧಾನ ಪೀಠವು ಅಸ್ತಿತ್ವಕ್ಕೆ ಬರಲಿದೆ. ಈ ಪೀಠವು ಸಂವಿಧಾನ ಮತ್ತು ಕಾನೂನುಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಇತ್ಯರ್ಥಪಡಿಸಲಿದೆ.

ಸಂವಿಧಾನ ಮತ್ತು ಕಾನೂನುಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಸಂಕೀರ್ಣತೆ ತಲೆದೋರಿದಾಗ, ಮೂವರು ನ್ಯಾಯಮೂರ್ತಿಗಳ ಪೀಠದ ಶಿಫಾರಸಿನ ಮೇರೆಗೆ ಐವರು ಸದಸ್ಯರ ಸಂವಿಧಾನ ಪೀಠವನ್ನು ರಚಿಸಲಾಗುತ್ತದೆ. ಏಳು ಮತ್ತು ಒಂಬತ್ತು ಸದಸ್ಯರ ಸಂವಿಧಾನ ಪೀಠಗಳೂ ಇವೆ. ಆದರೆ ಇವೆಲ್ಲವೂ ಆಯಾ ಪ್ರಕರಣಗಳು ಇತ್ಯರ್ಥವಾದ ನಂತರ ರದ್ದಾಗುತ್ತವೆ.

ಸುಪ್ರೀಂ ಕೋರ್ಟ್‌ಗೆ ಮಂಜೂರಾಗಿರುವ ಎಲ್ಲಾ 34 ನ್ಯಾಯಮೂರ್ತಿಗಳ ಹುದ್ದೆಗಳೂ ಭರ್ತಿಯಾಗಿವೆ. ಹೀಗಾಗಿ ಶಾಶ್ವತ ಸಂವಿಧಾನ ಪೀಠ ರಚನೆ ಸಾಧ್ಯವಾಗಿದೆ.

ಪ್ರತಿಕ್ರಿಯಿಸಿ (+)