ಗೋಧ್ರಾ ಗಲಭೆಯಲ್ಲಿ ಮೋದಿಗೆ ಕ್ಲೀನ್‌ಚಿಟ್‌: ಸುಪ್ರೀಂನಲ್ಲಿ ನ.19ರಿಂದ ವಿಚಾರಣೆ

7

ಗೋಧ್ರಾ ಗಲಭೆಯಲ್ಲಿ ಮೋದಿಗೆ ಕ್ಲೀನ್‌ಚಿಟ್‌: ಸುಪ್ರೀಂನಲ್ಲಿ ನ.19ರಿಂದ ವಿಚಾರಣೆ

Published:
Updated:

ನವದೆಹಲಿ: ಗೋಧ್ರಾ ಹತ್ಯೆಕಾಂಡ ಪ್ರಕರಣದಲ್ಲಿ ನರೇಂದ್ರ ಮೋದಿ ಸೇರಿದಂತೆ ಹಲವರಿಗೆ ಎಸ್‌ಐಟಿ (ವಿಶೇಷ ತನಿಖಾ ಸಂಸ್ಥೆ) ಕ್ಲೀನ್‌ಚಿಟ್‌ ನೀಡಿರುವುದನ್ನು ಪ್ರಶ್ನಿಸಿ ಜಾಕಿಯಾ ಜಾಫ್ರಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್‌ ತಿಳಿಸಿದೆ. 

ಇದೇ 19ರಂದು ಜಾಕೀಯಾ ಜಾಫ್ರಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಯಲಿದೆ. 

2002ರಲ್ಲಿ ಗೋಧ್ರಾ ಘಟನೆಯ ಬಳಿಕ ನಡೆದ ಗಲಭೆಯಲ್ಲಿ ಜಾಕಿಯಾ ಪತಿ, ಮಾಜಿ ಸಂಸದ ಎಹಸಾನ್ ಜಾಫ್ರಿ ಸೇರಿದಂತೆ 69 ಜನರನ್ನು ಹತ್ಯೆ ಮಾಡಲಾಗಿತ್ತು. ಈ ಗಲಭೆಯ ಸಂಚಿನಲ್ಲಿ ಅಂದಿನ ‌ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಸೇರಿದಂತೆ ರಾಜಕಾರಣಿಗಳು ಮತ್ತು ಅಧಿಕಾರಿಗಳು ಸೇರಿ  57 ಜನರು ಶಾಮಿಲಾಗಿದ್ದರು ಎಂದು ಜಾಕಿಯಾ ಗಂಭೀರವಾದ ಆರೋಪ ಮಾಡಿದ್ದರು.

ಈ ಪ್ರಕರಣದ ತನಿಖೆಗೆ ಸುಪ್ರೀಂಕೋರ್ಟ್‌ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಈ ಕುರಿತು ತನಿಖೆ ನಡೆಸಿದ್ದ ಎಸ್‌ಐಟಿ ವರದಿಯನ್ನು ಅಹಮದಾಬಾದ್‌ನ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಸಲ್ಲಿಸಿತ್ತು. ಈ ವರದಿಯನ್ನು ಆದರಿಸಿ ನ್ಯಾಯಾಲಯ ಮೋದಿ ಸೇರಿದಂತೆ ಹಲವರನ್ನು ಪ್ರಕರಣದಿಂದ ಖುಲಾಸೆ ಮಾಡಿತ್ತು. 

ಕೆಳ ನ್ಯಾಯಾಲಯದ ಆದೇಶ ಪ್ರಶ್ನಿಸಿ ಜಾಕಿಯಾ ಜಾಫ್ರಿ ಅವರು ಗುಜರಾತ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಗುಜರಾತ್ ಹೈಕೋರ್ಟ್‌ ಕೆಳ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದು, ಜಾಕಿಯಾ ಅವರನ್ನು ಮನವಿಯನ್ನು ತಿರಸ್ಕರಿಸಿತ್ತು. ಆದಾಗ್ಯೂ ಮುಂದಿನ ತನಿಖೆಗೆ ಮೇಲಿನ ಹಂತದ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ಜಾಕಿಯಾಗೆ ಹೈಕೋರ್ಟ್ ಅವಕಾಶ ನೀಡಿತ್ತು.

ನವೆಂಬರ್ 19ರಿಂದ ಸುಪ್ರೀಂಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ ಆರಂಭವಾಗಲಿದೆ.  

ಬರಹ ಇಷ್ಟವಾಯಿತೆ?

 • 9

  Happy
 • 1

  Amused
 • 0

  Sad
 • 1

  Frustrated
 • 7

  Angry

Comments:

0 comments

Write the first review for this !