ರೋಹಿಂಗ್ಯಾ ಗಡಿಪಾರು ಪ್ರಕರಣ: ಮಧ್ಯಪ್ರವೇಶಿಸಲು ನಿರಾಕರಿಸಿದ ಸುಪ್ರೀಂ

7

ರೋಹಿಂಗ್ಯಾ ಗಡಿಪಾರು ಪ್ರಕರಣ: ಮಧ್ಯಪ್ರವೇಶಿಸಲು ನಿರಾಕರಿಸಿದ ಸುಪ್ರೀಂ

Published:
Updated:

ನವದೆಹಲಿ: ಅಸ್ಸಾಂನ ಸಿಲ್ಚಾರ್‌ ಜೈಲಿನಲ್ಲಿರುವ ಏಳು ಮಂದಿ ರೊಹಿಂಗ್ಯಾ ನಿರಾಶ್ರಿತರನ್ನು ಗಡಿಪಾರು ಮಾಡುವ ವಿಚಾರವಾಗಿ ಸಲ್ಲಿಕೆಯಾಗಿರುವ ಮೇಲ್ಮನವಿಯೊಂದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌, ಪ್ರಕರಣ ಸಂಬಂಧ ಮಧ್ಯಪ್ರವೇಶಿಸಲು ನಿರಾಕರಿಸಿದೆ.

ಸುಮಾರು 40 ಸಾವಿರ ರೋಹಿಂಗ್ಯಾಗಳನ್ನು ಗಡಿಪಾರು ಮಾಡುವ ವಿಚಾರಕ್ಕೆ ಸಂಬಂದಿಸಿದಂತೆ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಅವರು ಬುಧವಾರ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ, ನಿರಾಶ್ರಿತರಿಗೆ ನೆರವಾಗುವುದು ನ್ಯಾಯಾಲಯದ ಕರ್ತವ್ಯ ಎಂದು ಉಲ್ಲೇಖಿಸಿದ್ದ ಅವರು, ಏಳು ಜನರ ಗಡಿಪಾಡು ಸನ್ನಿಹಿತವಾಗಿರುವುದರಿಂದ ಕೂಡಲೇ ವಿಚಾರಣೆ ನಡೆಸಬೇಕು ಎಂದೂ ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸುಪ್ರೀಂ, ಜವಾಬ್ದಾರಿ ಕುರಿತು ನ್ಯಾಯಾಲಯಕ್ಕೆ ನೆನಪು ಮಾಡುವ ಅಗತ್ಯವಿಲ್ಲ ಎಂದಿದೆ.

ವಿಚಾರಣೆ ವೇಳೆ ಕೇಂದ್ರ ಸರ್ಕಾರ, ‘ರೋಹಿಂಗ್ಯಾ ನಿರಾಶ್ರಿತರನ್ನು ತನ್ನ ನಾಗರೀಕರೆಂದು ಮ್ಯಾನ್ಮಾರ್‌ ಸರ್ಕಾರ ಒಪ್ಪಿಕೊಂಡಿದೆ ಹಾಗೂ ಅವರನ್ನು ವಾಪಸ್‌ ಸೇರಿಸಿಕೊಳ್ಳಲು ಒಪ್ಪಿದೆ’ ಎಂದು ವಾದಿಸಿದೆ.

ನಿರಾಶ್ರಿತರಾದ ಮೊಹಮದ್‌ ಸಲೀಮುಲ್ಲಾ ಹಾಗೂ ಮೊಹಮ್ಮದ್‌ ಸಾಕೀರ್‌ ಎನ್ನುವವರೂ ಏಳು ಜನರ ಗಡಿಪಾರು ವಿಚಾರಕ್ಕೆ ಸಂಬಂಧಿಸಿದಂತೆ ಬುಧವಾರ ಸಲ್ಲಿಸಿರುವ ಪ್ರಮುಖ ಅರ್ಜಿಗಳ ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ.

ದನ್ನೂ ಓದಿ: ಗಡಿಪಾರು ತಡೆ ಕೋರಿ ರೊಹಿಂಗ್ಯಾ ನಿರಾಶ್ರಿತರ ಅರ್ಜಿ

ಈ ಅರ್ಜಿಗಳಲ್ಲಿ, ‘ತಾರತಮ್ಯ, ಗಲಭೆ, ಹಿಂಸಾಚಾರ ಕೃತ್ಯಗಳು ವ್ಯಾಪಕವಾದ ಕಾರಣ ನಿರಾಶ್ರಿತರು ಮ್ಯಾನ್ಮಾರ್‌ನಿಂದ ತಪ್ಪಿಸಿಕೊಂಡು ಭಾರತಕ್ಕೆ ಬಂದು ಆಶ್ರಯ ಪಡೆದಿದ್ದಾರೆ. ಸದ್ಯ ಮ್ಯಾನ್ಮಾರ್‌ನಲ್ಲಿ ಕೆಟ್ಟ ಪರಿಸ್ಥಿತಿ ಇದೆ. ದೇಶಕ್ಕೆ ಹಿಂತಿರುಗುವವರನ್ನು ಹಿಂಸಿಸುವ ಇಲ್ಲವೇ ಕೊಲೆ ಮಾಡುವ ಸಾಧ್ಯತೆ ಇದೆ’ ಎಂಬ ಆತಂಕ ವ್ಯಕ್ತವಾಗಿದೆ.

2012ರಿಂದ ಮಣಿಪುರ ಗಡಿಯಲ್ಲಿ ನೆಲೆಸಿದ್ದ ಏಳು ಮಂದಿಯನ್ನು ಈಚೆಗೆ ವಶಕ್ಕೆ ಪಡೆದಿದ್ದ ಸರ್ಕಾರ ಅವರನ್ನು ಮ್ಯಾನ್ಮಾರ್‌ಗೆ ಗುರುವಾರ ಕಳುಹಿಸುವುದಾಗಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 11

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !