ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕಿತ್ಸೆ ಮಾರ್ಗಸೂಚಿ ಬದಲಿಸಲು ನಿರ್ದೇಶನ ನೀಡುವುದಿಲ್ಲ: ಸುಪ್ರೀಂ

Last Updated 30 ಏಪ್ರಿಲ್ 2020, 20:56 IST
ಅಕ್ಷರ ಗಾತ್ರ

ನವದೆಹಲಿ:ಪ್ರಸ್ತುತ ಕೋವಿಡ್-‌19 ರೋಗಿಗಳಿಗೆ ಹೈಡ್ರಾಕ್ಸಿಕ್ಲೊರೊಕ್ವಿನ್‌ (ಎಚ್‌ಸಿಕ್ಯು) ಹಾಗೂ ರೋಗನಿರೋಧಕ ಅಜಿಟ್ರೊಮೈಸಿನ್‌ (ಎಝೆಡ್‌ಎಂ) ನೀಡಲಾಗುತ್ತಿದೆ. ಈ ಔಷಧಗಳಿಂದ ಅಡ್ಡಪರಿಣಾಮ ಉಂಟಾಗುತ್ತಿದ್ದು, ಇದರಿಂದ ಜನರು ಸಾಯುತ್ತಿದ್ದಾರೆ ಎಂದು ಎನ್‌ಜಿಒ ಪೀಪಲ್‌ ಫಾರ್‌ ಬೆಟರ್‌ ಟ್ರೀಟ್‌ಮೆಂಟ್‌ ಅರ್ಜಿ ಸಲ್ಲಿಸಿತ್ತು.

ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಸಂಜಯ್‌ ಕಿಶನ್‌ ಕೌಲ್‌ ಹಾಗೂ ಬಿ.ಆರ್.‌ ಗವಾಯಿ ಅವರ ಪೀಠ, ಈ ವಿಷಯದಲ್ಲಿ ನ್ಯಾಯಪೀಠತಜ್ಞಸಂಸ್ಥೆಅಲ್ಲ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ (ಐಸಿಎಂಆರ್) ಈ ವಿಷಯವನ್ನು ತಿಳಿಸಬಹುದು. ಅವರು ಈ ಕುರಿತು ಪರಿಶೀಲಿಸಬಹುದು ಎಂದು ಹೇಳಿದೆ.

ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆಯಲ್ಲಿ ಪಾಲ್ಗೊಂಡ ಪಿಬಿಟಿ ಅಧ್ಯಕ್ಷರಾಗಿರುವ ಒಹಿಯೊ ಮೂಲದ ವೈದ್ಯ ಕುನಾಲ್‌ ಸಾಹಾ ಅವರು, ಪಿಡುಗಿಗೆ ನೀಡುತ್ತಿರುವ ಚಿಕಿತ್ಸೆಯನ್ನು ಪ್ರಶ್ನಿಸುತ್ತಿಲ್ಲ. ಆದರೆ ಎಚ್‌ಸಿಕ್ಯು ಹಾಗೂ ಎಝೆಡ್‌ ಔಷಧದಿಂದಾಗುವ ಅಡ್ಡಪರಿಣಾಮಗಳ ಕುರಿತು ಅಮೆರಿಕದ ಹೃದ್ರೋಗ ಸಂಸ್ಥೆ ಗಂಭೀರ ಎಚ್ಚರಿಕೆ ನೀಡಿದೆ. ಇದನ್ನು ಪರಿಗಣಿಸಬೇಕೆಂದು ಕೋರುತ್ತಿದ್ದೇನೆ’ ಎಂದಿದ್ದಾರೆ.

ಪ್ರಸ್ತುತ ಕೋವಿಡ್-19ಕ್ಕೆ ಯಾವುದೇ ಔಷಧ ಇಲ್ಲದಿರುವುದರಿಂದ, ವೈದ್ಯರು ವಿವಿಧ ಔಷಧಗಳಿಂದ ಚಿಕಿತ್ಸೆ ನೀಡಲು ಯತ್ನಿಸುತ್ತಿದ್ದಾರೆ. ಯಾವ ರೀತಿ ಚಿಕಿತ್ಸೆ ನೀಡಬೇಕು ಎನ್ನುವುದು ವೈದ್ಯರ ನಿರ್ಧಾರ. ಈ ಕುರಿತು ನ್ಯಾಯಾಲಯ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT