ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬೆರಕೆ ಹಾಲು ಮಾರಿದವನಿಗೆ ಜೈಲು ಶಿಕ್ಷೆ!

Last Updated 5 ಅಕ್ಟೋಬರ್ 2019, 13:02 IST
ಅಕ್ಷರ ಗಾತ್ರ

ನವದೆಹಲಿ: ಕಲಬೆರಕೆ ಹಾಲು ಮಾರಾಟ ಮಾಡಿದ ಆರೋಪದ ಮೇಲೆ 24 ವರ್ಷಗಳ ಹಿಂದೆ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ತೀರ್ಪು ನೀಡಿದ್ದು, ಉತ್ತರ ಪ್ರದೇಶದ ರಾಜ್‌ ಕುಮಾರ್‌ ಎಂಬುವವರಿಗೆ 6 ತಿಂಗಳ ಜೈಲು ಶಿಕ್ಷೆ ನೀಡಿದೆ.

ಆಹಾರ ಕಲಬೆರಕೆ ತಡೆಗಟ್ಟುವಿಕೆ ಕಾಯ್ದೆ ಅನ್ವಯ 1995ರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.ಕಾಯ್ದೆ ಪ್ರಕಾರ ಶೇ 8.5 ಬದಲಾಗಿ, ಆರೋಪಿ ನೀಡಿದ ಹಾಲಿನಲ್ಲಿ ಶೇ 4.6 ಕೊಬ್ಬಿನ ಅಂಶ ಮಾತ್ರ ಇತ್ತು.

ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ದೀಪಕ್‌ ಗುಪ್ತ ಮತ್ತು ಅನಿರುದ್ಧ ಬೋಸ್‌ ಅವರ ದ್ವಿಸದಸ್ಯ ಪೀಠ ಆರೋಪಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದ್ದು, ಮನುಷ್ಯನ ಅಗತ್ಯ ವಸ್ತುಗಳಲ್ಲಿ ಕಲಬೆರಕೆ ಸಲ್ಲದು ಎಂದು ಹೇಳಿದೆ ಎಂದು ಹಿಂದೂಸ್ಥಾನ್‌ ಟೈಮ್ಸ್‌ ಶನಿವಾರ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT