ಬುಧವಾರ, ನವೆಂಬರ್ 20, 2019
26 °C
ನಿರ್ದಿಷ್ಟ ಕಾರಣ ನೀಡದ ನ್ಯಾಯಾಲಯ

ಮಸೀದಿಗೆ ಮಹಿಳೆಯರ ಪ್ರವೇಶ: ವಿಚಾರಣೆ ಮುಂದೂಡಿದ ‘ಸುಪ್ರೀಂ’

Published:
Updated:

ನವದೆಹಲಿ: ದೇಶದಾದ್ಯಂತ ಮಸೀದಿಗಳಲ್ಲಿ ಮಹಿಳೆಯರಿಗೆ ಪ್ರವೇಶ ಕಲ್ಪಿಸುವಂತೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್‌) ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ಮುಂದೂಡಿದೆ.

‘ವಿಭಿನ್ನ ಕಾರಣಕ್ಕೆ’ ಈ ಪ್ರಕರಣದ ವಿಚಾರಣೆಯನ್ನು ಹತ್ತು ದಿನಗಳ ಕಾಲ ಮುಂದೂಡಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ.

ಪುಣೆ ಮೂಲದ ದಂಪತಿ ಯಾಸ್ಮೀನ್‌ ಜುಬೇರ್‌ ಅಹಮದ್ ಪೀರಜಾದೆ ಮತ್ತು ಜುಬೇರ್‌ ಅಹಮದ್‌ ನಾಜಿರ್‌ ಅಹಮದ್‌ ಪೀರಜಾದೆ ಸಲ್ಲಿಸಿರುವ ಪಿಐಎಲ್‌ಗೆ ಪ್ರತಿಕ್ರಿಯೆ ಸಲ್ಲಿಸಲು ನಾಲ್ಕು ವಾರಗಳ ಕಾಲಾವಕಾಶ ಅಗತ್ಯವಿದೆ ಎಂದು ಕೆಲವು ಸಂಘಟನೆಗಳು ಕೋರಿಕೆ ಸಲ್ಲಿಸಿವೆ ಎಂದು ನ್ಯಾಯಮೂರ್ತಿ ಎಸ್‌.ಎ. ಬೊಬಡೆ ನೇತೃತ್ವದ ಸಾಂವಿಧಾನಿಕ ಪೀಠ ತಿಳಿಸಿದೆ.

ಮಸೀದಿ ಒಳಗೆ ಮುಸ್ಲಿಂ ಮಹಿಳೆಗೆ ಪ್ರವೇಶ ನಿಷೇಧಿಸಿರುವುದು ಅಸಾಂವಿಧಾನಿಕವಾಗಿದೆ. ಜತೆಗೆ, ಮೂಲಭೂತ ಹಕ್ಕು, ಸಮಾನತೆ, ಲಿಂಗ ಸಮಾನತೆಯ ಉಲ್ಲಂಘನೆಯಾಗಿದೆ ಎಂದು ಪಿಐಎಲ್‌ನಲ್ಲಿ ದೂರಲಾಗಿದೆ.

ದೇಶದಲ್ಲಿನ ಮಸೀದಿಗಳು ಅನುದಾನವು ಸೇರಿದಂತೆ ಸರ್ಕಾರದಿಂದ ಎಲ್ಲ ಲಾಭಗಳನ್ನು ಪಡೆದುಕೊಳ್ಳುತ್ತಿವೆ. ಹೀಗಾಗಿ, ಮಹಿಳೆಯರಿಗೂ ಮಸೀದಿಗಳಲ್ಲಿ ಪ್ರವೇಶ ಕಲ್ಪಿಸುವಂತೆ ನಿರ್ದೇಶನ ನೀಡಬೇಕು ಎಂದು ಪಿಐಎಲ್‌ನಲ್ಲಿ ಕೋರಲಾಗಿದೆ.

ಪ್ರತಿಕ್ರಿಯಿಸಿ (+)