ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈದರಾಬಾದ್‌: ಮಕ್ಕಳಿಗೆ ಬೆತ್ತಲೆ ಶಿಕ್ಷೆ, ಶಾಲೆಯ ಮಾನ್ಯತೆ ರದ್ದು

Last Updated 27 ಡಿಸೆಂಬರ್ 2018, 11:57 IST
ಅಕ್ಷರ ಗಾತ್ರ

ಹೈದರಾಬಾದ್‌: ತಡವಾಗಿ ಬಂದ ಕಾರಣಕ್ಕೆ ಮಕ್ಕಳಿಗೆ ಬೆತ್ತಲಾಗುವ ಶಿಕ್ಷೆ ನೀಡಿದ್ದಚಿತ್ತೂರು ಜಿಲ್ಲೆಯಚೈತನ್ಯ ಭಾರತಿ ಆಂಗ್ಲ ಮಾಧ್ಯಮ ಶಾಲೆಯ ಮಾನ್ಯತೆಯನ್ನು ರದ್ದುಗೊಳಿಸಲಾಗಿದೆ.

ಹತ್ತು ವರ್ಷದ ಆರು ಮಕ್ಕಳು ಶಾಲೆಗೆ ತಡವಾಗಿ ಬಂದಿದ್ದರು. ಜೊತೆಗೆ ಹೋಂವರ್ಕ್‌ ಮಾಡಿರಲಿಲ್ಲ.ಈ ಕಾರಣಕ್ಕೆ ಮಕ್ಕಳನ್ನು ಬೆತ್ತಲಾಗಿಸಿ ಬಿಸಿಲಿನಲ್ಲಿ ನಿಲ್ಲಿಸಲಾಗಿತ್ತು. ದಾರಿ ಹೋಕರು ಮಕ್ಕಳ ವಿಡಿಯೊಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ನಂತರ ಘಟನೆ ಬೆಳಕಿಗೆ ಬಂದಿದೆ.

ಜಿಲ್ಲಾ ಶಿಕ್ಷಣ ಅಧಿಕಾರಿ ಮತ್ತು‍ಪ್ರಾದೇಶಿಕ ಜಂಟಿ ನಿರ್ದೇಶಕರು ಶಾಲೆಗೆ ಭೇಟಿ ನೀಡಿದರು. ಮಕ್ಕಳ ಸಮಸ್ಯೆ ಆಲಿಸಿದ ಅಧಿಕಾರಿಗಳು ತಕ್ಷಣವೇ ಶಾಲಾ ಮಾನ್ಯತೆ ರದ್ದುಗೊಳಿಸಿದ್ದಾರೆ.ಶಾಲಾ ಸಿಬ್ಬಂದಿ ನಾಗರಾಜು ನಾಯ್ಡು ಅವರನ್ನು ಬಂಧಿಸಲಾಗಿದೆ.ಘಟನೆ ಕುರಿತು ಪೋಷಕರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಘಟನೆಯನ್ನು ವಿರೋಧಿಸಿ ಪೋಷಕರು ಪ್ರತಿಭಟನಾ ಮೆರವಣಿಗೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT