ಸೋಮವಾರ, ಡಿಸೆಂಬರ್ 16, 2019
17 °C

ರೆಡ್‌ ಅಲರ್ಟ್‌: ಮುಂಬೈನಲ್ಲಿ ಶಾಲೆಗಳಿಗೆ ರಜೆ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಭಾರಿ ಮಳೆ ಸುರಿಯುವ ನಿರೀಕ್ಷೆಯಿಂದಾಗಿ ಹವಾಮಾನ ಇಲಾಖೆ ‘ರೆಡ್‌ ಅಲರ್ಟ್’ ಎಚ್ಚರಿಕೆ ನೀಡಿದ್ದರಿಂದ ಮಹಾರಾಷ್ಟ್ರ ಸರ್ಕಾರ ಗುರುವಾರ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಣೆ ಮಾಡಿತ್ತು.  

ಆದರೆ ನಿರೀಕ್ಷಿಸಿದಂತೆ ನಗರದಲ್ಲಿ ಮಳೆಯಾಗಲಿಲ್ಲ. ಮಧ್ಯಾಹ್ನ ತುಂತುರು ಮಳೆಯಾಯಿತು. ಬುಧವಾರ ರಾತ್ರಿ ಒಂದಷ್ಟು ಮಳೆ ಸುರಿದಿತ್ತು.

ಶಾಲೆ– ಕಾಲೇಜುಗಳಿಗೆ ರಜೆ ಆದೇಶವನ್ನು  ಬುಧವಾರ ರಾತ್ರಿಯೇ ಶಿಕ್ಷಣ ಸಚಿವ ಅಶೀಶ್‌ ಸೆಲರ್‌ ಅವರು ನೀಡಿದ್ದರು. ಆದರೆ ಸಾಕಷ್ಟು ಶಿಕ್ಷಣ ಸಂಸ್ಥೆಗಳು ತೆರೆದಿದ್ದವು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು