ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಿಸ್ಯಾಟ್‌–29’ ಉಡಾವಣೆ ನಾಳೆ

Last Updated 12 ನವೆಂಬರ್ 2018, 20:15 IST
ಅಕ್ಷರ ಗಾತ್ರ

ಚೆನ್ನೈ: ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಸಂಪರ್ಕ ಸೇವೆ ವೃದ್ಧಿಗೆ ಪೂರಕವಾಗುವ ‘ಜಿಸ್ಯಾಟ್‌–29’ ಸಂಪರ್ಕ ಉಪಗ್ರಹವನ್ನು ಇಸ್ರೊ ಬುಧವಾರ ಸಂಜೆ 5 ಗಂಟೆಗೆ ಉಡಾವಣೆ ಮಾಡಲಿದೆ.

ಶ್ರೀಹರಿಕೋಟದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಈ ಉಪಗ್ರಹ ಉಡಾವಣೆಯಾಗಲಿದೆ. ಆದರೆ, ’ಗಾಜಾ’ ಚಂಡಮಾರುತದಿಂದ ಹವಾಮಾನದಲ್ಲಿ ವೈಪರೀತ್ಯವಾದರೆ ಉಡಾವಣೆ ಸಮಯದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ.

‘ಜಿಸ್ಯಾಟ್‌–29’ ಉಪಗ್ರಹವು 3,423 ಕಿಲೋ ಗ್ರಾಂ ತೂಕವಿದೆ. ಇದು 10 ವರ್ಷಗಳ ಕಾಲ ಕಾರ್ಯಾಚರಣೆ ನಡೆಸಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಈ ಮೊದಲಿನ ಸಂಪರ್ಕ ಉಪಗ್ರಹ ‘ಜಿಸ್ಯಾಟ್‌–6ಎ’ ವಿಫಲವಾಗಿದ್ದರಿಂದ ಈ ಉಪಗ್ರಹ ಉಡಾವಣೆ ಮಹತ್ವ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT