ಗುರುವಾರ , ಆಗಸ್ಟ್ 22, 2019
21 °C

ಅತಿ ಚಿಕ್ಕದಾದ ಸ್ಟೆಂಟ್‌ ಅಭಿವೃದ್ಧಿಪಡಿಸಿದ ವಿಜ್ಞಾನಿಗಳು

Published:
Updated:
Prajavani

ಜಿನಿವಾ: ವಿಶ್ವದಲ್ಲೇ ಅತಿ ಚಿಕ್ಕದಾದ ಸ್ಟೆಂಟ್‌ ಅನ್ನು ವಿಜ್ಞಾನಿಗಳು ಇದೀಗ ಅಭಿವೃದ್ಧಿಪಡಿಸಿದ್ದಾರೆ.

ಇದುವರೆಗೆ ತಯಾರಾಗಿರುವ ಸ್ಟೆಂಟ್‌ಗಳಿಗಿಂತ ಇದು 40 ಪಟ್ಟು ಚಿಕ್ಕದಾಗಿದೆ. ವ್ಯಾಸದಲ್ಲಿ 100 ಮೈಕ್ರೊಮೀಟರ್‌ಗಿಂತಲೂ ಕಡಿಮೆ ಇರುವ ಈ ಸ್ಟೆಂಟ್‌ ಅನ್ನು, ಝುರಿಚ್‌ನ ಫೆಡರಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

 ಹೃದಯ ಸಂಬಂಧಿ ಕಾಯಿಲೆಗಳಲ್ಲೇ ಸ್ಟೆಂಟ್‌ ಅನ್ನು ಹೆಚ್ಚು ಬಳಸಲಾಗುತ್ತದೆ. ಹೃದಯ ರಕ್ತ ನಾಳದಲ್ಲಿ ತಡೆ ಉಂಟಾದರೆ ಸ್ಟೆಂಟ್‌ ಬಳಸಲಾಗುತ್ತದೆ. ಜತೆಗೆ, ಮೂತ್ರಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳಲ್ಲೂ  ಸ್ಟೆಂಟ್‌ ಉಪಯೋಗಿಸಲಾಗುತ್ತದೆ.

‘ಒಂದು ಸಾವಿರ ಮಕ್ಕಳಲ್ಲಿ ಒಬ್ಬರು ಮೂತ್ರ ವಿಸರ್ಜನೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಮೂತ್ರ ಸಂಗ್ರಹವಾಗಿ ಮೂತ್ರಕೋಶಕ್ಕೆ ಹಾನಿಯಾಗುವುದನ್ನು ತಡೆಯಲು ತಜ್ಞರು ಶಸ್ತ್ರಚಿಕಿತ್ಸೆ ಮೂಲಕ ಈ ರೀತಿಯ ಚಿಕ್ಕ ಸ್ಟೆಂಟ್‌ ಬಳಸಬಹುದು’ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

’ಈ ಸ್ಟೆಂಟ್‌ ಅನ್ನು ಮಕ್ಕಳಿಗೆ ಉಪಯೋಗಿಸುವ ಮುನ್ನ ಪ್ರಾಣಿಗಳ ಮೇಲೆ ಪ್ರಾಯೋಗಿಕ ಪರೀಕ್ಷೆ ನಡೆಸುವುದು ಅಗತ್ಯವಿದೆ. ನಾವು ಆಶಾಭಾವ ಹೊಂದಿದ್ದೇವೆ. ಶಸ್ತ್ರಚಿಕಿತ್ಸೆ ಕ್ಷೇತ್ರದಲ್ಲಿ ಇದು ಹೊಸ ಅಭಿವೃದ್ಧಿ ಶಕೆ ಆರಂಭಿಸಲಿದೆ ಎನ್ನುವ ವಿಶ್ವಾಸವಿದೆ’ ಎಂದು ಮಕ್ಕಳ ತಜ್ಞ ಗ್ಯಾಸ್ಟನ್‌ ಡೆ. ಬೆರ್ನಾರ್ಡಿಸ್‌ ತಿಳಿಸಿದ್ದಾರೆ.

 

Post Comments (+)