ಸೋಮವಾರ, ಆಗಸ್ಟ್ 19, 2019
21 °C

370ನೇ ವಿಧಿ ರದ್ದತಿ ಅಥವಾ ಅದರ ಪರಿಣಾಮ ಬಗ್ಗೆ ಸಂದೇಹ ಇಲ್ಲ: ಅಮಿತ್ ಶಾ  

Published:
Updated:

ಚೆನ್ನೈ:  ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿರುವುದರಿಂದ ಅಲ್ಲಿ ಭಯೋತ್ಪಾದನೆ ಕಡಿಮೆಯಾಗಿ ಅಭಿವೃದ್ಧಿಯುಂಟಾಗುತ್ತದೆ ಎಂದು ಕೇಂದ್ರ ಗೃಹ  ಸಚಿವ ಅಮಿತ್ ಶಾ ಹೇಳಿದ್ದಾರೆ.

ಗುಜರಾತಿನ ಶಾಸಕನಾಗಿದ್ದಾಗಲೇ ನಾನು ಕಾಶ್ಮೀರಕ್ಕೆ ವಿಶೇಷಾಧಿಕಾರ ಕೊಟ್ಟ ಸಂವಿಧಾನದ ವಿಧಿ ರದ್ದುಗೊಳಿಸುವುದರ ಪರವಾಗಿದ್ದೆ.  ಗೃಹ ಸಚಿವನಾದ ನಂತರ ಈ ವಿಧಿಯನ್ನು ರದ್ದು ಮಾಡುವ ಬಗ್ಗೆ ಅಥವಾ ಅದರ ಪರಿಣಾಮ ಬಗ್ಗೆ ನನಗೆ ಯಾವುದೇ ಗೊಂದಲಗಳಿರಲಿಲ್ಲ ಎಂದಿದ್ದಾರೆ ಅಮಿತ್ ಶಾ.

ಚೆನ್ನೈನಲ್ಲಿ ಉಪಾಧ್ಯಕ್ಷ ವೆಂಕಯ್ಯನಾಯ್ಡು ಅವರು ಕಚೇರಿಯಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅಮಿತ್ ಶಾ ಈ ಮಾತುಗಳನ್ನಾಡಿದ್ದಾರೆ.

370ನೇ ವಿಧಿ ಜಮ್ಮ ಕಾಶ್ಮೀರಕ್ಕಾಗಲೀ ದೇಶಕ್ಕಾಗಲೀ ಒಳಿತುಂಟು ಮಾಡಲಿಲ್ಲ. ಅದು ಕಾಶ್ಮೀರದ ಅಭಿವೃದ್ಧಿಗೆ ತಡೆಯಾಗಿತ್ತು
ಸಂವಿಧಾನದಿಂದ ಅದನ್ನು ತೆಗೆದುಹಾಕಬೇಕೆಂದು ನಾನು ದೃಢ ನಿಶ್ಚಯ ಮಾಡಿದ್ದೆ. ಇದೀಗ ಅದನ್ನು ರದ್ದು ಮಾಡಿದ್ದರಿಂದ ಕಾಶ್ಮೀರದಲ್ಲಿ ಭಯೋತ್ಪಾದನೆ ನಿಂತು ಅಭಿವೃದ್ಧಿಯುಂಟಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಅಮಿತ್ ಶಾ ಮತ್ತು ಪ್ರಧಾನಿ ಮೋದಿಯನ್ನು ಕೃಷ್ಣಾರ್ಜುನರಿಗೆ ಹೋಲಿಸಿದ ರಜನಿಕಾಂತ್ 

Post Comments (+)