ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ಸಹ್ಯವಾಗುವಂತೆ ಮಾಡಿದವರು

Last Updated 25 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

‘ಕ್ಷಣ ಕ್ಷಣಂ’ ಚಿತ್ರವನ್ನು ಅದು ಬಿಡುಗಡೆಯಾದ ಹೊಸದರಲ್ಲಿ ನಮ್ಮ ಮನೆಯಲ್ಲಿ ವಿ.ಸಿ.ಆರ್. ಮತ್ತು ಕ್ಯಾಸೆಟ್ ತಂದು ವಾರಕ್ಕೊಮ್ಮೆಯಾದರೂ ನೋಡುತ್ತಿದ್ದೆವು. ಶ್ರೀದೇವಿ ಪಾತ್ರಕ್ಕಾಗಿ, ಅವರ ತಮಾಷೆಯ ಟೈಮಿಂಗ್‌ಗಾಗಿ. ನಾವು ಅತ್ಯಂತ ದುರ್ಭರ ದಿನಗಳನ್ನು ಎದುರಿಸುತ್ತಿದ್ದ ಕಾಲ. ಶ್ರೀದೇವಿಯವರ ‘ಇಂಗ್ಲಿಷ್ ವಿಂಗ್ಲೀಷ್’ ಕೂಡಾ ನಮ್ಮ ಮನೆಯ ಎಲ್ಲರ ಫೇವರಿಟ್. ಜಗತ್ತಿನ ಎಷ್ಟು ಕೋಟಿ ಜನಗಳ ಬದುಕಿನ ಕತ್ತಲಲ್ಲಿ ಉಲ್ಲಾಸದ ಬೆಳಕನ್ನು ಕೊಟ್ಟಿದ್ದಾರೋ ಶ್ರೀದೇವಿಯವರು. ತಮಾಷೆಯ ಟೈಮಿಂಗ್ ಎನ್ನುವುದು ಅತ್ಯಂತ ಕಷ್ಟದ್ದು. ಅದು ಅತ್ಯಂತ ಸಹಜವಾಗಿತ್ತು ಶ್ರೀದೇವಿಯವರಿಗೆ. ಗ್ರೇಟ್ ಎಂದು ನಿಸ್ಸಂದೇಹವಾಗಿ ಹೇಳಬಹುದಾಗಿದ್ದ ದೈತ್ಯ ಪ್ರತಿಭೆ ಅವರದು. ನೀವು ಇಷ್ಟು ಬೇಗ ಹೋಗುತ್ತೀರಿ ಎಂದು ನಾವು ಯಾರೂ ಭಾವಿಸಿರಲಿಲ್ಲ. ನಿಮ್ಮ ಫೋಟೊ ನೋಡಿದರೆ ಯಾವಾಗಲೂ ಲಾಸ್ಯ ತುಂಬುತ್ತಿದ್ದ ಮನಸ್ಸಿಗೆ ಇವತ್ತು ವಿಷಾದ ತುಂಬುತ್ತಿದೆ. ನಮಗೆ ಕಷ್ಟ ಕಾಲದಲ್ಲಿ ಕೊಟ್ಟ ಸಂತೋಷದ ಕ್ಷಣಗಳಿಗೆ ನಿಮಗೆ ಕೋಟಿ ನಮನ.

-ಟಿ.ಎನ್. ಸೀತಾರಾಂ

ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT