ಬಿಗ್‌ ಬಾಸ್‌: ಕಮಲ್‌ ಹಾಸನ್‌ ವಿರುದ್ಧ ದೂರು

7

ಬಿಗ್‌ ಬಾಸ್‌: ಕಮಲ್‌ ಹಾಸನ್‌ ವಿರುದ್ಧ ದೂರು

Published:
Updated:

ಚೆನ್ನೈ: ನಟ ಕಮಲ್‌ಹಾಸನ್‌ ನಡೆಸಿಕೊಡುವ ತಮಿಳು ಅವತರಣಿಕೆಯ ‘ಬಿಗ್‌ ಬಾಸ್‌’ ಎರಡನೇ ಆವೃತ್ತಿಯ ಕಾರ್ಯಕ್ರಮ ವಿವಾದಕ್ಕೆ ಕಾರಣವಾಗಿದೆ.

ಕಾರ್ಯಕ್ರಮದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾರನ್ನು ‘ಸರ್ವಾಧಿಕಾರಿ’ಯಂತೆ ಬಿಂಬಿಸಲಾಗಿದೆ ಎಂಬ ಆರೋಪ ಎದುರಾಗಿದ್ದು, ಈ ಕಾರ್ಯಕ್ರಮವನ್ನು ನಿಷೇಧಿಸಬೇಕು ಎಂದು ದೂರು ದಾಖಲಾಗಿದೆ.

ವಕೀಲರಾದ ಲೂಯಿಸಾಲ್‌ ರಮೇಶ್‌ ಕಮಲ್‌ ಹಾಸನ್‌ ವಿರುದ್ಧವೂ ದೂರು ದಾಖಲಿಸಿದ್ದು, ‘ಮಕ್ಕಳ್‌ ನೀದಿ ಮೈಯಂ ಪಕ್ಷದ ಸ್ಥಾಪಕರಾಗಿರುವ ಕಮಲ್‌ ಹಾಸನ್‌ ಈ ಕಾರ್ಯಕ್ರಮವನ್ನು ತಮ್ಮ ರಾಜಕೀಯ ಹಿತಾಸಕ್ತಿ ವೃದ್ಧಿಸಲು ಬಳಸಿಕೊಳ್ಳುತ್ತಿದ್ದಾರೆ. ಜಯಲಲಿತಾ ಅವರ ಮಾನಹಾನಿ ಮಾಡಲಾಗುತ್ತಿದೆ’ ಎಂದು ದೂರಿದ್ದಾರೆ. 

 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !