ಅತ್ಯಾಚಾರ: ಆಶು ಮಹರಾಜ್‌ ಬಂಧನ

7

ಅತ್ಯಾಚಾರ: ಆಶು ಮಹರಾಜ್‌ ಬಂಧನ

Published:
Updated:
Deccan Herald

ನವದೆಹಲಿ: ಮಹಿಳೆ ಮತ್ತು ಆಕೆಯ ಅಪ್ರಾಪ್ತೆ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕಾಗಿ ಸ್ವಯಂಘೋಷಿತ ದೇವಮಾನ ಆಶು ಮಹರಾಜ್‌ ಅವರನ್ನು ಗುರುವಾರ ಬಂಧಿಸಲಾಗಿದೆ.

‌‌‌‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಶು ಮಹರಾಜ್‌ ಮಗ ಸಮರ್‌ ಖಾನ್‌ ಅವರನ್ನು ಬಂಧಿಸಲಾಗಿದೆ’ ಎಂದು ಪೊಲೀಸ್‌ ಹೆಚ್ಚುವರಿ ಆಯುಕ್ತ ರಾಜೀವ್‌ ರಂಜನ್‌ ತಿಳಿಸಿದ್ದಾರೆ. 

‘2008 ಮತ್ತು 2013 ರ ನಡುವೆ ಸ್ನೇಹಿತರು ಮತ್ತು ಆತನ ಮಗನ ಎದುರೇ ಆಶು ಮಹರಾಜ್‌ ನನ್ನ ಮೇಲೆ ಅತ್ಯಾಚಾರ ಎಸಗಿದ್ದ. ನಂತರ ಮಗಳನ್ನು ಜೊತೆಗೆ ಕರೆತರುವಂತೆ ಹೇಳಿದ್ದ ಆತನ, ಆಕೆಯ ಮೇಲೆಯೂ ಅತ್ಯಾಚಾರ ಎಸಗಿದ’ ಎಂದು ಸಂತ್ರಸ್ತ ಮಹಿಳೆ ತಿಳಿಸಿದ್ದಾರೆ. 

ಕಳೆದ ವಾರ ಹಾಝ್ ಖಾಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಭಾನುವಾರ ಪ್ರಕರಣದ ತನಿಖೆಯನ್ನು ಅಪರಾಧ ಶಾಖೆಗೆ ವರ್ಗಾಯಿಸಲಾಗಿದೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 2

  Sad
 • 0

  Frustrated
 • 1

  Angry

Comments:

0 comments

Write the first review for this !