ಅಫ್ಜಲ್ ಗುರು ಗಲ್ಲಿಗೇರಿಸಿ ಆರು ವರ್ಷ: ಕಾಶ್ಮೀರದಾದ್ಯಂತ ಬಂದ್‌

7

ಅಫ್ಜಲ್ ಗುರು ಗಲ್ಲಿಗೇರಿಸಿ ಆರು ವರ್ಷ: ಕಾಶ್ಮೀರದಾದ್ಯಂತ ಬಂದ್‌

Published:
Updated:

ಶ್ರೀನಗರ: ಸಂಸತ್‌ ಮೇಲೆ ನಡೆದ ದಾಳಿಯ ರೂವಾರಿ ಅಫ್ಜಲ್‌ ಗುರುವನ್ನು ಗಲ್ಲಿಗೇರಿಸಿ ಆರು ವರ್ಷಗಳಾದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕಾಶ್ಮೀರದ ಹಲವೆಡೆ ಶುಕ್ರವಾರ ನಿರ್ಬಂಧ ವಿಧಿಸಲಾಗಿತ್ತು.

ಪ್ರತ್ಯೇಕತಾವಾದಿಗಳು ಕಾಶ್ಮೀರ ಪ್ರತಿಭಟನೆಗೆ ಕರೆ ನೀಡಿದ್ದ ಕಾರಣ ಕಾಶ್ಮೀರದಾದ್ಯಂತ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ವಾಣಿಜ್ಯ ವಹಿವಾಟು, ಸಾರ್ವಜನಿಕ ಸಾರಿಗೆ ಸ್ಥಗಿತಗೊಂಡಿತ್ತು. 

ಪ್ರತಿಭಟನೆ ನಿಯಂತ್ರಿಸುವ ಸಲುವಾಗಿ ನಗರದ ಹಲವು ಭಾಗಗಳಲ್ಲಿ ನಿರ್ಬಂಧ ವಿಧಿಸಲಾಗಿತ್ತು. ರಸ್ತೆಗಳಲ್ಲಿ ತಂತಿ ಬೇಲಿ ಮತ್ತು ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ಹಲವು ಪ್ರತ್ಯೇಕತಾವಾದಿಗಳನ್ನು ಬಂಧಿಸಲಾಗಿತ್ತು. 

ಉತ್ತರ ಕಾಶ್ಮೀರದ ಸೊಪೊರೆಯ ಜಾಗೀರ್‌ ಘಾಟ್‌ ಗ್ರಾಮದ ಅಫ್ಜಲ್ ನಿವಾಸಕ್ಕೆ ಹಲವು ಪ್ರತ್ಯೇಕತಾವಾದಿಗಳು ಭೇಟಿ ನೀಡಿ, ಅಫ್ಜಲ್‌ ಕುಟುಂಬಕ್ಕೆ ಸಾಂತ್ವನ ಹೇಳಿದರು. ಅಲ್ಲದೇ ಅಫ್ಜಲ್‌ ಪಾರ್ಥೀವ ಶರೀರದ ಅವಶೇಷಗಳನ್ನು ವಾಪಸ್‌ ನೀಡುವಂತೆ ಒತ್ತಾಯಿಸಿದ್ದಾರೆ.

2013ರ ಫೆಬ್ರುವರಿ 9 ರಂದು ಅಫ್ಜಲ್‌ ಗುರುವನ್ನು ದೆಹಲಿಯ ತಿಹಾರ್‌ ಜೈಲಿನಲ್ಲಿ ರಹಸ್ಯವಾಗಿ ಗಲ್ಲಿಗೇರಿಸಲಾಗಿತ್ತು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !