ಗುರುವಾರ , ಮಾರ್ಚ್ 4, 2021
24 °C
52 ಬಾಂಬ್‌ ಸ್ಫೋಟ ಪ್ರಕರಣಗಳಲ್ಲಿ ಭಾಗಿಯಾಗಿರುವ ಜಾಲೀಸ್‌ ಅನ್ಸಾರಿ

ಡಾ.ಬಾಂಬ್ ಕುಖ್ಯಾತಿಯ ಉಗ್ರಗಾಮಿ ತಪ್ಪಿಸಿಕೊಂಡ 24 ಗಂಟೆಯಲ್ಲಿ‌ ಸೆರೆ

ಪಿಟಿಐ Updated:

ಅಕ್ಷರ ಗಾತ್ರ : | |

jalis ansari

ಲಖನೌ : ಪೆರೋಲ್‌ ಮೇಲೆ ಬಿಡುಗಡೆಯಾಗಿ ತಲೆಮರೆಸಿಕೊಂಡಿದ್ದ ಮುಂಬೈ ಸರಣಿ ಸ್ಫೋಟದ ಅಪರಾಧಿ ಜಾಲೀಸ್‌ ಅನ್ಸಾರಿ ಎಂಬಾತನನ್ನು ಉತ್ತರ ಪ್ರದೇಶದ ಕಾನ್ಪುರದಲ್ಲಿ ವಿಶೇಷ ಕಾರ್ಯ ಪಡೆ ಮತ್ತು ಮಹಾರಾಷ್ಟ್ರದ ಭಯೋತ್ಪಾದನೆ ನಿಗ್ರಹ ದಳ ಬಂಧಿಸಿವೆ ಎಂದು ಡಿಜಿಪಿ ಒ.ಪಿ.ಸಿಂಗ್‌ ಶುಕ್ರವಾರ ತಿಳಿಸಿದ್ದಾರೆ. 

ಈತ 1993ರ ಮುಂಬೈ ಸರಣಿ ಸ್ಫೋಟದಲ್ಲಿ ಭಾಗಿಯಾಗಿದ್ದು, ರಾಜಸ್ಥಾನದ ಅಜ್ಮೀರ್‌ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದನು. 21 ದಿನಗಳ ಪೆರೋಲ್‌ ಮೇಲೆ ಬಿಡುಗಡೆಗೊಂಡಿದ್ದ ಈತ ಗುರುವಾರ ನಾಪತ್ತೆಯಾಗಿದ್ದನು. ಈತನ ಮಗ ಜಾಯೀದ್‌ ಅನ್ಸಾರಿ, ತಂದೆ ಕಾಣೆಯಾಗಿರುವ ಕುರಿತು ಮುಂಬೈ ಅಗ್ರಿಪದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. 

ಡಾ.ಬಾಂಬ್‌ ಎಂದೇ ಕುಖ್ಯಾತಿ ಪಡೆದಿದ್ದ ಅನ್ಸಾರಿ ದೇಶದಾದ್ಯಂತ ನಡೆದ 52 ಬಾಂಬ್‌ ಸ್ಫೋಟ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಪೆರೋಲ್‌ ಮೇಲೆ ಬಿಡುಗಡೆಯಾಗಿದ್ದ ಈತ ನಿತ್ಯ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12 ಗಂಟೆ ಒಳಗೆ ಅಗ್ರಿಪದ ಪೊಲೀಸ್‌ ಠಾಣೆಯಲ್ಲಿ ಸಹಿ ಹಾಕಬೇಕಿತ್ತು. ಆದರೆ, ಗುರುವಾರ ಸಹಿ ಹಾಕದೇ ಕಾಣೆಯಾಗಿದ್ದನು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು