ಮಂಗಳವಾರ, ಆಗಸ್ಟ್ 20, 2019
22 °C

ಅಧಿವೇಶನ ಆ. 2ರವರೆಗೆ ವಿಸ್ತರಣೆ?

Published:
Updated:

ನವದೆಹಲಿ: ಸಂಸತ್ತಿನ ಬಜೆಟ್‌ ಅಧಿವೇಶನ ಆಗಸ್ಟ್‌ 2ರವರೆಗೆ ವಿಸ್ತರಣೆಯಾಗುವ ಸಾಧ್ಯತೆ ಇದೆ. ಬಾಕಿ ಇರುವ ಮಸೂದೆಗಳ ಅಂಗೀಕಾರಕ್ಕಾಗಿ ಈ ನಿರ್ಧಾರಕ್ಕೆ ಬರಬಹುದು ಎನ್ನಲಾಗಿದೆ.

ನಿಗದಿಯಂತೆ ಇದೇ 26ಕ್ಕೆ ಅಧಿವೇಶನ ಕೊನೆಗೊಳ್ಳಬೇಕು. ಆದರೆ, ಇನ್ನೂ ಐದು ದಿನ ಕಲಾಪ ಮುಂದುವರಿಸಲು ಸರ್ಕಾರ ಬಯಸಿದೆ. ಈಗಾಗಲೇ ಹೊರಡಿಸಲಾಗಿರುವ 10 ಸುಗ್ರೀವಾಜ್ಞೆಗಳಿಗೆ ಸಂಸತ್ತಿನ ಅನುಮೋದನೆ ಪಡೆದುಕೊಳ್ಳುವುದು ಸರ್ಕಾರದ ಉದ್ದೇಶ. ಇದರಲ್ಲಿ ತ್ರಿವಳಿ ತಲಾಖ್‌ ಪದ್ಧತಿಯನ್ನು ಅಪರಾಧವಾಗಿ ಪರಿಗಣಿಸುವ ಸುಗ್ರೀವಾಜ್ಞೆಯೂ ಇದೆ. 

ಸುಗ್ರೀವಾಜ್ಞೆ ಜಾರಿಗೊಂಡ ಆರು ತಿಂಗಳೊಳಗೆ ಸಂಸತ್ತಿನ ಒಪ್ಪಿಗೆ ಪಡೆಯುವುದು ಕಡ್ಡಾಯ. ಹತ್ತು ಸುಗ್ರೀವಾಜ್ಞೆಗಳಲ್ಲಿ ತ್ರಿವಳಿ ತಲಾಖ್‌ ಮಸೂದೆಯೇ ಹೆಚ್ಚು ವಿವಾದಾತ್ಮಕ. ರಾಜ್ಯಸಭೆಯಲ್ಲಿ ಈ ಮಸೂದೆಗೆ ಹೆಚ್ಚಿನ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ. 

Post Comments (+)