ಶನಿವಾರ, ಆಗಸ್ಟ್ 24, 2019
27 °C

ಐವರು ಮಹಿಳೆಯರು ಸೇರಿ 7 ನಕ್ಸಲರ ಹತ್ಯೆ

Published:
Updated:

ರಾಯಪುರ: ಛತ್ತೀಸಗಡದ ರಾಜ್‌ನಂದಗಾಂವ್‌ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆಸಿದ ಗುಂಡಿನ ಚಕಮಕಿಯಲ್ಲಿ ಐವರು ಮಹಿಳೆಯರು ಸೇರಿ ಏಳು ನಕ್ಸಲರು ಹತರಾಗಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಸೀತಾಗೋಟ–ಸರ್ಪಾರ್‌ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ಬೆಳಿಗ್ಗೆ 7 ಗಂಟೆಗೆ ಜಿಲ್ಲಾ ಮೀಸಲು ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ನಕ್ಸಲರನ್ನು ಹೊಡೆದುರುಳಿಸಲಾಗಿದೆ ಎಂದು ಉಪ ಪೊಲೀಸ್‌ ಮಹಾನಿರೀಕ್ಷಕ (ನಕ್ಸಲ್‌ ನಿಗ್ರಹ ಕಾರ್ಯಾಚರಣೆ) ಸುಂದರರಾಜ್‌ ಪಿ. ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಯೋಧ ಅಸಾರಾಂ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 

‘ಛತ್ತೀಸಗಡ–ಮಹಾರಾಷ್ಟ್ರ ಗಡಿಯಲ್ಲಿನ ಬಾಗ್‌ನಾಡಿ ವಲಯದಲ್ಲಿ ಶುಕ್ರವಾರ ರಾತ್ರಿ ಕಾರ್ಯಾಚರಣೆ ಆರಂಭಿಸಲಾಯಿತು. ಅರಣ್ಯ ಪ್ರದೇಶದೊಳಗೆ ಭದ್ರತಾ ಪಡೆಗಳು ಮುನ್ನುಗ್ಗುತ್ತಿದ್ದಂತೆ ನಕ್ಸಲರು ಗುಂಡಿನ ದಾಳಿ ನಡೆಸಿದರು. ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿ, 7 ಮಂದಿಯನ್ನು ಹೊಡೆದುರುಳಿಸಿದರು’ ಎಂದು ಅವರು ತಿಳಿಸಿದ್ದಾರೆ.

Post Comments (+)