ಪಾಕ್‌ ಸೇನೆಯ ಮೂವರು ಯೋಧರ ಹತ್ಯೆ

ಶನಿವಾರ, ಏಪ್ರಿಲ್ 20, 2019
27 °C
ಗಡಿಯಲ್ಲಿ ಅಪ್ರಚೋದಿತ ಶೆಲ್ ದಾಳಿ: ತಕ್ಕ ಪ್ರತ್ಯುತ್ತರ ನೀಡಿದ ಭಾರತ

ಪಾಕ್‌ ಸೇನೆಯ ಮೂವರು ಯೋಧರ ಹತ್ಯೆ

Published:
Updated:
Prajavani

ಜಮ್ಮು (ಪಿಟಿಐ): ಪಾಕಿಸ್ತಾನಿ ಸೇನಾಪಡೆಗಳು ಗಡಿಯಲ್ಲಿ ಕದನವಿರಾಮ ಉಲ್ಲಂಘಿಸಿ ನಡೆಸಿದ ಅಪ್ರಚೋದಿತ ಶೆಲ್ ದಾಳಿಗೆ ಭಾರತೀಯ ಸೇನಾಪಡೆ ಮಂಗಳವಾರ ತಕ್ಕ ಪ್ರತಿದಾಳಿ ನಡೆಸಿದ್ದು, ಪಾಕಿಸ್ತಾನದ ಗಡಿಯಲ್ಲಿದ್ದ ಏಳು ಸೇನಾನೆಲೆಗಳನ್ನು ನಾಶ ಮಾಡಿದೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ರುಖ್ ಕಾಕರಿ, ರಾವಲ್‌ಕೋಟ್‌ ಗಡಿಯ ಏಳು ಮುಂಚೂಣಿ ಸೇನಾನೆಲೆಗಳನ್ನು ನಾಶ ಮಾಡಲಾಗಿದೆ. ಈ ವೇಳೆ ಪಾಕಿಸ್ತಾನದ ಹಲವು ಯೋಧರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ‘ಭಾರತೀಯ ಪಡೆಗಳು ನಡೆಸಿದ ಪ್ರತಿದಾಳಿಯಲ್ಲಿ ಪಾಕ್ ಪಡೆಯ 3 ಯೋಧರು ಮೃತಪಟ್ಟಿದ್ದಾರೆ’ ಎಂದು ಪಾಕಿಸ್ತಾನದ ಅಂತರ–ಸೇವಾ ಸಾರ್ವಜನಿಕ ಸಂಪರ್ಕ (ಐಎಸ್‌ಪಿಆರ್) ತಿಳಿಸಿದೆ.

ಸವಾಲು ಎದುರಿಸಲು ಸಿದ್ಧ’

ಜಮ್ಮು (ಪಿಟಿಐ): ‘ಗಡಿಯಲ್ಲಿ ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕಿಸ್ತಾನದ ಸೇನಾಪಡೆಗಳು, ಯಾವುದೇ ಸವಾಲು ಒಡ್ಡಿದರೂ ಅದನ್ನು ಎದುರಿಸಲು ನಮ್ಮ ಪಡೆ ಸಂಪೂರ್ಣ ಸಿದ್ಧವಿದೆ‌’ ಎಂದು ಬಿಎಸ್‌ಎಫ್ ಮುಖ್ಯಸ್ಥ ರಜನಿಕಾಂತ್ ಮಿಶ್ರಾ ಹೇಳಿದ್ದಾರೆ. 

ನಾಗರಿಕ ಪ್ರದೇಶಗಳನ್ನು ಗುರಿಯಾಗಿರಿಸಿ ಪಾಕ್ ದಾಳಿ ನಡೆಸುತ್ತಿರುವುದು ದುರದೃಷ್ಟಕರ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !