ಎಸ್‌ಎಫ್‌ಐ ನಾಯಕನ ಹತ್ಯೆ

7

ಎಸ್‌ಎಫ್‌ಐ ನಾಯಕನ ಹತ್ಯೆ

Published:
Updated:

ಕೊಚ್ಚಿ : ಎರ್ನಾಕುಲಂನ ಮಹಾರಾಜ ಕಾಲೇಜಿನಲ್ಲಿ ಭಾನುವಾರ ರಾತ್ರಿ ಸ್ಟೂಡೆಂಟ್ ಫೆಡರೇಷನ್ ಆಫ್ ಇಂಡಿಯಾ (ಎಸ್‌ಎಫ್‌ಐ) ನಾಯಕ ಅಭಿಮನ್ಯು (20) ಅವರನ್ನು ಹತ್ಯೆ ಮಾಡಲಾಗಿದೆ. ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಇವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ.

ಇಸ್ಲಾಂ ಪರ ಸಂಘಟನೆಯಾಗಿರುವ ಕ್ಯಾಂಪಸ್ ಫ್ರಂಟ್ ಹಾಗೂ ಅದರ ಪೋಷಕ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸದಸ್ಯರು ಈ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಹತ್ಯೆ ಖಂಡಿಸಿ ಸಿಪಿಎಂ ವಿದ್ಯಾರ್ಥಿ ಸಂಘಟನೆ ಎಸ್‌ಎಫ್‌ಐ ರಾಜ್ಯವ್ಯಾಪಿ ಪ್ರತಿಭಟನೆಗೆ ಕರೆ ನೀಡಿದೆ. ಅಭಿಮನ್ಯು, ಕಾಲೇಜಿನಲ್ಲಿ ಎರಡನೇ ವರ್ಷದ ಪದವಿ ಅಭ್ಯಾಸ ಮಾಡುತ್ತಿದ್ದರು.

‘ಕಾಲೇಜಿನ ಗೋಡೆಯನ್ನು ಬಳಸಿಕೊಳ್ಳುವ ಕುರಿತು ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿದ್ದು ದಾಳಿಗೆ ಕಾರಣವಾಗಿರುವ ಶಂಕೆ ಇದೆ. ಪ್ರಕರಣದ ಸಂಬಂಧ ಪಿಎಫ್‌ಐ ಹಾಗೂ ಕ್ಯಾಂಪಸ್ ಫ್ರಂಟ್‌ನ ಮೂವರು ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !