ಗುರುವಾರ , ಡಿಸೆಂಬರ್ 5, 2019
20 °C

ಶಬರಿಮಲೆ: ಮೊದಲ ದಿನ ₹3.30 ಕೋಟಿ ಆದಾಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶಬರಿಮಲೆ: ಶಬರಿಮಲೆಗೆ ಆಗಮಿಸುತ್ತಿರುವ ಭಕ್ತರ ಸಂಖ್ಯೆ ದಿನೇ ದಿನೆ ಏರಿಕೆಯಾಗುತ್ತಿದ್ದು, ಕಳೆದ ಮೂರು ದಿನದಲ್ಲಿ 70 ಸಾವಿರಕ್ಕೂ ಅಧಿಕ ಭಕ್ತರು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ. ಶನಿವಾರ ಒಂದೇ ದಿನದಲ್ಲಿ ₹3.30 ಕೋಟಿಗೂ ಅಧಿಕ ಆದಾಯ ಸಂಗ್ರಹವಾಗಿದೆ. 

ಕಳೆದ ವರ್ಷ ಮೊದಲ ದಿನ ₹1.28 ಕೋಟಿ ಆದಾಯ ಸಂಗ್ರಹವಾಗಿತ್ತು. ‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಆದಾಯ ಶೇ 50 ಏರಿಕೆಯಾಗಿದೆ’ ಎಂದು ತಿರುವಂಕೂರ್‌ ದೇವಸ್ಥಾನ ಮಂಡಳಿಯ ಅಧ್ಯಕ್ಷ ಎನ್‌.ವಾಸು ಸೋಮವಾರ ತಿಳಿಸಿದರು.

ಈ ವರ್ಷ ಭಕ್ತರ ಸಂಖ್ಯೆ ಹೆಚ್ಚಿದ್ದು, ದೇವಸ್ಥಾನ ಪ್ರದೇಶದಲ್ಲಿ ಸೂಕ್ತ ಮೂಲ ಸೌಲಭ್ಯದ ಕೊರತೆಯಿದೆ ಎಂದು ಭಕ್ತರು ಆರೋಪಿಸಿದ್ದಾರೆ. ಕಳೆದ ವರ್ಷ ಇದೇ ಸಮಯದಲ್ಲಿ ಶಬರಿಮಲೆಯಲ್ಲಿ ಪ್ರತಿಭಟನೆಗಳು ನಡೆದು, ಭಕ್ತರಿಗೆ ಅನನುಕೂಲವಾಗಿತ್ತು. ‘ಈ ಬಾರಿ ಶಾಂತಿಯುತವಾದ ವಾತಾವರಣವಿದ್ದು, ಯಾವುದೇ ನಿರ್ಬಂಧಗಳನ್ನೂ ಹೇರುತ್ತಿಲ್ಲ’ ಎಂದು ಭಕ್ತರೊಬ್ಬರು ಹೇಳಿದರು. 

ಪ್ರತಿಕ್ರಿಯಿಸಿ (+)