ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯು: ಬೋಧನಾ ಶುಲ್ಕ ಏರಿಕೆ

Last Updated 4 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆಯು ಐದು ವರ್ಷಗಳ ನಂತರ ಶುಲ್ಕಗಳನ್ನು ಪರಿಷ್ಕರಿಸಿದೆ. ರಾಜ್ಯದ ಸರ್ಕಾರಿ, ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ 2018-19 ಸಾಲಿನಿಂದ ಅನ್ವಯಿಸುವಂತೆ ಆದೇಶಿಸಿದೆ.

ವಿದ್ಯಾರ್ಥಿಗಳು ಹಾಗೂ ಕಾಲೇಜುಗಳಿಗೆ ಅನ್ವಯವಾಗುವಂತೆ 46 ಬಗೆಯ ಶುಲ್ಕಗಳನ್ನು ಇಲಾಖೆ ಹೆಚ್ಚಿಸಿದ್ದು 2013–14 ಸಾಲಿನಿಂದ ಇಲ್ಲಿಯವರೆಗಿದ್ದ ಶುಲ್ಕಕ್ಕೆ ಹೋಲಿಸಿದರೆ ಶೇ 60ರವರೆಗೆ ಏರಿಕೆ ಆಗಿದೆ. ಬೋಧನಾ ಶುಲ್ಕವನ್ನು ಶೇ 31.94ರಷ್ಟು ಏರಿಸಲಾಗಿದ್ದು, ₹1,008 ಇದ್ದಿದ್ದು ಈ ಬಾರಿಯಿಂದ ₹1,330 ಆಗಲಿದೆ. ವರ್ಗಾವಣೆ ಶುಲ್ಕವನ್ನು ₹360ರಿಂದ ₹480ಕ್ಕೆ ಏರಿಸಲಾಗಿದೆ. ವಿಷಯ ಬದಲಾವಣೆಯ ಶುಲ್ಕ ₹600 ಇದ್ದಿದ್ದು ₹800 ಆಗಿದೆ.

**

ಪದವಿ ಪೂರ್ವ ಕಾಲೇಜುಗಳ ಪರಿಷ್ಕೃತ ಶುಲ್ಕ

ವಿಭಾಗ ಸದ್ಯದ ಶುಲ್ಕ ಪರಿಷ್ಕೃತ ಶುಲ್ಕ ಶೇಕಡಾವಾರು ಹೆಚ್ಚಳ

ಪರೀಕ್ಷಾ ಕೇಂದ್ರ ಬದಲಾವಣೆ ₹1,200 ₹2,000 66.66

ನೂತನ ಕಾಲೇಜು ನೋಂದಣಿ ₹72,000 ₹1,00,800 40.00

ಪ್ರವೇಶ ಶುಲ್ಕ ₹36 ₹50 38.89

ವರ್ಗಾವಣಾ ಶುಲ್ಕ ₹360 ₹480 33.34

ವಿಷಯ ಬದಲಾವಣೆ ₹600 ₹800 33.34

ನಕಲು ಅಂಕಪಟ್ಟಿ ₹1,200 ₹1,600 33.33

ಕಾಲೇಜು ಮನ್ನಣೆ ನವೀಕರಣ ₹9,000 ₹12,000 33.33

ಮರುಮೌಲ್ಯಮಾಪನ 1,260 ₹1,670 32.53

ಬೋಧನಾ ಶುಲ್ಕ ₹1,008 ₹1,330 31.94

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT