ಈಗಲಾದರೂ ನಿಮ್ಮನ್ನು ಅಪ್ಪಾ ಎನ್ನಲೇ?: ಕರುಣಾನಿಧಿಗೆ ಭಾವುಕ ಪತ್ರ ಬರೆದ ಸ್ಟಾಲಿನ್‌

7

ಈಗಲಾದರೂ ನಿಮ್ಮನ್ನು ಅಪ್ಪಾ ಎನ್ನಲೇ?: ಕರುಣಾನಿಧಿಗೆ ಭಾವುಕ ಪತ್ರ ಬರೆದ ಸ್ಟಾಲಿನ್‌

Published:
Updated:

ಬೆಂಗಳೂರು: ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ನಾಯಕ ಎಂ.ಕರುಣಾನಿಧಿ ಸಾವಿಗೆ ನಾಡಿನ ಜನರು ಕಂಬನಿ ಮಿಡಿಯುತ್ತಿರುವ ಹೊತ್ತಲ್ಲೇ ಅವರ ಮಗ ಎಂ.ಕೆ. ಸ್ಟಾಲಿನ್‌ ಅವರು ಭಾವುಕವಾಗಿ ಪತ್ರವೊಂದನ್ನು ಬರೆದಿದ್ದಾರೆ.

ಕರುಣಾನಿಧಿ ಅವರು ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿಯಲ್ಲಿ ಮಂಗಳವಾರ ಸಂಜೆ 06.10ಕ್ಕೆ ಕೊನೆಯುಸಿರೆಳೆದಿದ್ದರು. ಈ ಸುದ್ದಿಯನ್ನು ಆಸ್ಪತ್ರೆಯ ಉನ್ನತ ಮೂಲಗಳು ಖಚಿತಪಡಿಸುತ್ತಿದ್ದಂತೆ ರಾಜಕೀಯ ವಲಯದಲ್ಲಿ ಸೂತಕದ ಛಾಯೆ ಆವರಿಸಿದಂತಾಗಿತ್ತು.

ಈ ದುಖಃದ ನಡುವೆಯೂ ಸ್ಟಾಲಿನ್‌ ಬರೆದಿರುವ ಪತ್ರ ಅಪ್ಪ–ಮಕ್ಕಳ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ. ಪತ್ರವನ್ನು ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಿದ್ದಾರೆ. ಇದನ್ನು 35 ಸಾವಿರಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದು, 11 ಸಾವಿರಕ್ಕೂ ಹೆಚ್ಚು ಜನ ತಮ್ಮ ಪುಟಗಳಲ್ಲಿ ಹಂಚಿಕೊಂಡಿದ್ದಾರೆ.

ಪತ್ರದ ಕನ್ನಡ ಅನುವಾದ ಇಲ್ಲಿದೆ.

**

ಎಲ್ಲಿಗೆ ಹೋಗುವುದಿದ್ದರೂ ನನಗೆ ತಿಳಿಸಿ ತೆರಳುತ್ತಿದ್ದಿರಿ. ಈ ಬಾರಿ ನನಗೆ ಹೇಳದೆ ಎಲ್ಲಿಗೆ ಹೋದಿರಿ? ತಾಳಲಾರದಷ್ಟು ನೋವು ನೀಡಿ ನೀವು ಹೋದದ್ದು ಎಲ್ಲಿಗೆ?

33 ವರ್ಷಗಳ ಹಿಂದೆ ನಿಮ್ಮ ಸ್ಮಾರಕದಲ್ಲಿ ಏನನ್ನು ಬರೆಯಲಾಗುತ್ತದೆ ಎಂಬುದನ್ನು ಕೇಳಿದ್ದಿರಿ: ‘ಜೀವನಪೂರ್ತಿ ಅನಾಯಾಸವಾಗಿ ಕೆಲಸಮಾಡಿದ ವ್ಯಕ್ತಿ ಇಲ್ಲಿ ಮಲಗಿದ್ದಾನೆ. ತಮಿಳು ಸಮಾಜಕ್ಕೆ ಸಾಕೆನಿಸುವಷ್ಟು ಕೆಲಸ ಮಾಡಿದ್ದೇನೆ ಎಂದು ನೀವು ನಿರ್ಧರಿಸಿಬಿಟ್ಟಿರಾ? ಅಥವಾ 80 ವರ್ಷಗಳ ಸಾರ್ವಜನಿಕ ಬದುಕಿನಲ್ಲಿ ತಾವು ಮಾಡಿದ ಸಾಧನೆಗಳನ್ನು ಯಾರಾದರು ಸರಿಗಟ್ಟಬಲ್ಲರೇ ಎಂಬುದನ್ನು ನೋಡಲು ಮರೆಯಲ್ಲೆಲ್ಲಾದರೂ ನಿಂತಿದ್ದೀರಾ?’

ಜೂನ್‌ 3 ರಂದು ನಿಮ್ಮ ಜನುಮ ದಿನದಂದು ನಿಮ್ಮ ಸಾಮರ್ಥ್ಯದ ಅರ್ಧದಷ್ಟನ್ನು ನೀಡಿ ಎಂದು ಬೇಡಿಕೊಂಡಿದ್ದೆ. ಈಗ ಬಹುದಿನಗಳ ಹಿಂದೆ ನೀವು ಅರೈಂಗರ್‌ ಅಣ್ಣನಿಂದ ಪಡೆದಿದ್ದ ನಿಮ್ಮ ಹೃದಯವನ್ನು ನಮಗೆ ನೀಡಿ. ಯಾಕೆಂದರೆ, ಪೂರ್ಣಗೊಳ್ಳದ ನಿಮ್ಮ ಕನಸುಗಳು, ಚಿಂತನೆಗಳನ್ನು ನಾವು ಈ ವಿಶೇಷ ದಾನದಿಂದ ಪೂರ್ಣಗೊಳಿಸುತ್ತೇವೆ!

ಉಡನ್‌ಪಿರುಪುಕ್ಕಳ್‌ (ಕರುಣಾನಿಧಿ ಅವರು ಕಾರ್ಯಕರ್ತರನ್ನು ಒಡಹುಟ್ಟಿದವರು ಎನ್ನಲು ಬಳಸುತ್ತಿದ್ದ ಪದ) ಪರವಾಗಿ ನಾನು ನಿಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ. ಉಡನ್‌ಪಿರಪ್ಪೆ ಎಂದು ಒಮ್ಮೆ ಗಟ್ಟಿಯಾಗಿ ಹೇಳಿ. ಅದು ನೂರು ವರ್ಷಕಾಲ ಕೆಲಸ ಮಾಡಲು ಸ್ಫೂರ್ತಿ ನೀಡುತ್ತದೆ. ನಾನು ನನ್ನ ಬದುಕಿನ ಬಹುಸಮಯ ನಿಮ್ಮನ್ನು ಅಪ್ಪ ಎಂದು ಕರೆಯುವ ಬದಲು ತಲೈವರ್‌(ನಾಯಕ) ಎಂದೇ ಕರೆದಿದ್ದೇನೆ. ಆದರೆ, ಕನಿಷ್ಠ ಈಗಲಾದರೂ ನಿಮ್ಮನ್ನು ಅಪ್ಪಾ ಎನ್ನಲೇ?

ಕಂಬನಿಯೊಂದದಿಗೆ

–ಎಂ.ಕೆ. ಸ್ಟಾಲಿನ್‌

**

ಇಲ್ಲಿವೆ ಇನ್ನಷ್ಟು ಸುದ್ದಿಗಳು

 

ಬರಹ ಇಷ್ಟವಾಯಿತೆ?

 • 11

  Happy
 • 2

  Amused
 • 2

  Sad
 • 2

  Frustrated
 • 2

  Angry

Comments:

0 comments

Write the first review for this !