ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂದಾದೇವಿ: ಮೃತದೇಹ ಹೊರತೆಗೆಯಲು ಗಾಳಿ ಅಡ್ಡಿ

Last Updated 6 ಜೂನ್ 2019, 5:34 IST
ಅಕ್ಷರ ಗಾತ್ರ

ಪಿತೋರ್‌ಗಡ: ಉತ್ತರಾಖಂಡದ ನಂದಾದೇವಿ ಪರ್ವತದ ಪೂರ್ವ ಭಾಗದಲ್ಲಿ ಕಣ್ಮರೆಯಾಗಿದ್ದ ಎಂಟು ಮಂದಿ ಚಾರಣಿಗರಲ್ಲಿ ಐವರ ಮೃತದೇಹಗಳು ಪತ್ತೆ ಆಗಿವೆ. ಆದರೆ, ಮೃತದೇಹಗಳನ್ನು ಹೊರ ತೆಗೆಯಲು ವಾಯು ಪಡೆಯ ವಿಮಾನಗಳು ಹರಸಾಹಸಪಟ್ಟೂಬುಧವಾರ ವಿಫಲವಾದವು.

‘ವೇಗದಿಂದ ಕೂಡಿದ ರಭಸವಾದ ಗಾಳಿ ಕಾರ್ಯಾಚರಣೆಗೆ ಅಡ್ಡಿ ಮಾಡಿತು. ಮೃತದೇಹಗಳನ್ನು ಹೊರತೆಗೆಯುವ ಕಾರ್ಯವು ಒಂದು ವಾರದವರೆಗೂ ನಡೆಯಲಿದೆ’ ಎಂದು ಪಿತೋರ್‌ಗಡದ ಜಿಲ್ಲಾ ನ್ಯಾಯಾಧೀಶ ವಿ.ಕೆ ಜೋಗ್ದಂಡೆ ಹೇಳಿದರು.

‘ನಮ್ಮೊಂದಿಗೆ 35 ರಾಜ್ಯ ವಿಪತ್ತು ರಕ್ಷಣಾ ಪಡೆಯ ಸಿಬ್ಬಂದಿ ಸೇರಿಕೊಳ್ಳಲಿದ್ದಾರೆ. ಇವರನ್ನು ಎರಡು ವಿಭಾಗ ಮಾಡಿ, ಭೂ ಹಾಗೂ ವಾಯು ಮಾರ್ಗವಾಗಿ ಕಳುಹಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT