ಬಿಹಾರ: ಮಂಜು ವರ್ಮಾ ಮನೆ ಮೇಲೆ ಸಿಬಿಐ ದಾಳಿ

7
ಮುಜಫ್ಫರ್‌ಪುರ: ಲೈಂಗಿಕ ದೌರ್ಜನ್ಯ ಪ್ರಕರಣ

ಬಿಹಾರ: ಮಂಜು ವರ್ಮಾ ಮನೆ ಮೇಲೆ ಸಿಬಿಐ ದಾಳಿ

Published:
Updated:

ನವದೆಹಲಿ: ಮುಜಫ್ಫರ್‌ಪುರ ಪುನರ್ವಸತಿ ಕೇಂದ್ರದಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ಸಂಬಂಧ ಬಿಹಾರದ ಮಾಜಿ ಸಚಿವೆ ಮಂಜು ವರ್ಮಾ ಅವರ ಮನೆಗಳು ಸೇರಿದಂತೆ ನಾಲ್ಕು ಜಿಲ್ಲೆಗಳ ವಿವಿಧ ಸ್ಥಳಗಳಲ್ಲಿ ಸಿಬಿಐ ಶುಕ್ರವಾರ ಶೋಧ ಕಾರ್ಯ ನಡೆಸಿತು. 

ಜತೆಗೆ, ಪುನರ್ವಸತಿ ಕೇಂದ್ರ ನಡೆಸುತ್ತಿದ್ದ ಬ್ರಜೇಶ್ ಠಾಕೂರ್‌ಗೆ ಸೇರಿದ ಮುಜಫ್ಫರ್‌‍ಪುರದಲ್ಲಿನ ಹೋಟೆಲ್‌, ‌ಅವರ ಸ್ನೇಹಿತರು ಮತ್ತು ಸಂಬಂಧಿಕರಿಗೆ ಸೇರಿದ ಏಳು ಸ್ಥಳಗಳು, ಠಾಕೂರ್‌ ಅವರ ಸ್ವಯಂ ಸೇವಾ ಸಂಸ್ಥೆಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ ಮಧು ಕುಮಾರಿ ಅವರ ಮನೆಯ ಮೇಲೂ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಧು ಕುಮಾರಿ ನಾಪತ್ತೆಯಾಗಿದ್ದಾರೆ. 

ಮಂಜು ವರ್ಮಾ ಅವರ ಪತಿ ಪುನರ್ವಸತಿ ಕೇಂದ್ರಕ್ಕೆ ನಿಯಮಿತವಾಗಿ ಭೇಟಿ ನೀಡುತ್ತಿದ್ದರು ಎನ್ನುವ ಆರೋಪ ಕೇಳಿಬಂದ ಬಳಿಕ, ಸಮಾಜ ಕಲ್ಯಾಣ ಸಚಿವ ಸ್ಥಾನಕ್ಕೆ ಅವರು ‌ಕಳೆದ ವಾರ ರಾಜೀನಾಮೆ ನೀಡಿದ್ದರು. ಎರಡು ತಿಂಗಳ ಹಿಂದೆ ಹಗರಣ ಬಹಿರಂಗವಾದಾಗಿನಿಂದ, ಸಿಬಿಐ ತನಿಖೆ ನಡೆಸುವಂತೆ ಹಾಗೂ ಹೈಕೋರ್ಟ್‌ ಇದರ ಮೇಲ್ವಿಚಾರಣೆ ವಹಿಸುವಂತೆ ವಿರೋಧ ಪಕ್ಷಗಳು ಆಗ್ರಹಿಸುತ್ತಿದ್ದವು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !