ಸೋಮವಾರ, ಅಕ್ಟೋಬರ್ 21, 2019
22 °C

ರ್‍ಯಾನ್‌ಬಾಕ್ಸಿ ಫಾರ್ಮಾಸ್ಯುಟಿಕಲ್ಸ್‌ನ ಮಾಜಿ ಪ್ರವರ್ತಕ ಶಿವಿಂದರ್ ಸಿಂಗ್ ಬಂಧನ

Published:
Updated:
Shivinder Singh

ನವದೆಹಲಿ: ₹740 ಕೋಟಿ  ಅವ್ಯವಹಾರ ಆರೋಪದಲ್ಲಿ ರ್‍ಯಾನ್‌ಬಾಕ್ಸಿ ಫಾರ್ಮಾಸ್ಯುಟಿಕಲ್ಸ್‌ನ ಮಾಜಿ ಪ್ರವರ್ತಕ ಶಿವಿಂದರ್ ಸಿಂಗ್, ಮಾಜಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುನಿಲ್ ಗೋಧ್ವಾನಿ ಸೇರಿದಂತೆ ಮೂವರನ್ನು ದೆಹಲಿ ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧ ದಳ ಗುರುವಾರ ಬಂಧಿಸಿದೆ.

ಇದನ್ನೂ ಓದಿ: ‘ರೆಲಿಗೇರ್‌ ಇನ್ಸೂರೆನ್ಸ್‌’ ವಿರುದ್ಧ ವಂಚನೆ ದೂರು

 2018 ಡಿಸೆಂಬರ್‌ನಲ್ಲಿ ರೆಲಿಗೇರ್ ಎಂಟರ್‌ಪ್ರೈಸೆಸ್ ಲಿಮಿಟೆಡ್ (ಆರ್‌ಇಎಲ್) ಅಧೀನದ ರೆಲಿಗೇರ್ ಫಿನ್‌ವೆಸ್ಟ್ (ಆರ್‌ಎಫ್ಎಲ್) ಪ್ರವರ್ತಕ ಮಲ್ವಿಂದರ್ ಮೋಹನ್ ಸಿಂಗ್ ಮತ್ತು ಶಿವಿಂದರ್ ಮೋಹನ್ ಸಿಂಗ್ ವಿರುದ್ಧ ದೆಹಲಿ ಪೊಲೀಸರ ಆರ್ಥಿಕ ಅಪರಾಧ ದಳಕ್ಕೆ ದೂರು ನೀಡಿತ್ತು. ಇದಾಗಿ 5 ತಿಂಗಳ ನಂತರ ಮೋಸ, ವಂಚನೆ ಮತ್ತು ಫಂಡ್ ದುರ್ಬಳಕೆ ಆರೋಪ ಹೊರಿಸಿತ್ತು.

ಆಗಸ್ಟ್ ತಿಂಗಳಲ್ಲಿ ಜಾರಿ ನಿರ್ದೇಶನಾಲಯವು ಸಿಂಗ್  ಸಹೋದರ ಮನೆಯಲ್ಲಿ ಶೋಧ ನಡೆಸಿತ್ತು.

ಸುಮಾರು ₹740 ಕೋಟಿ  ವಂಚನೆ ಮತ್ತು ದುರುಪಯೋಗ ನಡೆಸಿದ್ದಾರೆ ಎಂದು ರೆಲಿಗೇರ್ ಫಿನ್‌ವೆಸ್ಟ್,  ಸಿಂಗ್ ಸಹೋದರರ ವಿರುದ್ಧ ಆರೋಪಿಸಿದೆ. 

ಇದನ್ನೂ ಓದಿ: ಸನ್‌ಫಾರ್ಮಾದಲ್ಲಿ ರ್‍ಯಾನ್‌­ಬಾಕ್ಸಿ ವಿಲೀನ

ಎರಡು ಶತಕೋಟಿ ಡಾಲರ್ ಮೌಲ್ಯದ ರ್‍ಯಾನ್‌ಬಾಕ್ಸಿ  ಲ್ಯಾಬೊರೇಟರೀಸ್ ವಾರೀಸುದಾರರಾಗಿದ್ದರು ಶಿವಿಂದರ್ ಸಿಂಗ್ ಮತ್ತು ಮಲ್ವಿಂದರ್ ಸಿಂಗ್.  2008ರಲ್ಲಿ ಇವರು ರ್‍ಯಾನ್‌ಬಾಕ್ಸಿಯನ್ನು ಜಪಾನಿನ ದಾಯ್ಚಿ ಸಾಂಕ್ಯೊ ಕಂಪನಿಗೆ ಮಾರಿ ಕುಟುಂಬ ಮಾಲೀಕತ್ವದ ಫೊರ್ಟೀಸ್ ಹೆಲ್ತ್ ಕೇರ್ ಮತ್ತು ರೆಲಿಗೇರ್ ಎಂಟರ್‌ಪ್ರೈಸೆಸ್‌ನ್ನು ಕಂಪನಿಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: ಫೊರ್ಟೀಸ್‌ ಉಪಾಧ್ಯಕ್ಷ ಶಿವಿಂದರ್‌ ‘ಸತ್ಸಂಗಿ’

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)