ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

115 ಶ್ರಮಿಕ್‌ ರೈಲುಗಳಲ್ಲಿ 1 ಲಕ್ಷ ವಲಸಿಗರ ಸಂಚಾರ: ರೈಲ್ವೆ ಇಲಾಖೆ

Last Updated 6 ಮೇ 2020, 14:01 IST
ಅಕ್ಷರ ಗಾತ್ರ

ನವದೆಹಲಿ: 'ಮೇ 1ರಿಂದ 6ರ ಸಂಜೆವರೆಗೂ115 ಶ್ರಮಿಕ್ ವಿಶೇಷ ರೈಲುಗಳು, 1 ಲಕ್ಷಕ್ಕೂ ಹೆಚ್ಚು ವಲಸಿಗ ಕಾರ್ಮಿಕರನ್ನು ಅವರ ತವರೂರುಗಳಿಗೆ ತಲುಪಿಸಿವೆʼ ಎಂದು ರೈಲ್ವೆ ಇಲಾಖೆ ಬುಧವಾರ ತಿಳಿಸಿದೆ.

ಪ್ರತಿಯೊಂದು ರೈಲಿನಲ್ಲಿಯೂ 24 ಕೋಚ್‌ಗಳಿದ್ದು, ಪ್ರತಿ ಕೋಚ್‌ನಲ್ಲಿ 72 ಸೀಟುಗಳಿವೆ. ಆದರೆ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಪ್ರತಿ ಕೋಚ್‌ನಲ್ಲಿ ಕೇವಲ 54 ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ.

ಈ ರೈಲುಗಳ ಸೇವೆಗೆ ಇಲ್ಲಿಯವರೆಗೆ ಎಷ್ಟು ವೆಚ್ಚ ಮಾಡಲಾಗಿದೆ ಎನ್ನುವುದನ್ನು ರೈಲ್ವೆ ಇಲಾಖೆ ಅಧಿಕೃತವಾಗಿ ತಿಳಿಸಿಲ್ಲ. ಆದರೆ 85:15 ಅನುಪಾತದಲ್ಲಿ ವೆಚ್ಚ ಹಂಚಿಕೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ.

ಪ್ರತಿ ಸಂಚಾರಕ್ಕೆ ರೈಲ್ವೆ ಇಲಾಖೆ ಸುಮಾರು 80 ಲಕ್ಷ ವೆಚ್ಚ ಮಾಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT