ಬುಧವಾರ, ನವೆಂಬರ್ 13, 2019
28 °C

ಎಲ್ಲ ಜಿಲ್ಲೆಗಳಲ್ಲೂ ಆಯುಷ್ ಆಸ್ಪತ್ರೆ: ನಾಯಕ್

Published:
Updated:

ಹೈದರಾಬಾದ್‌: ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಆಯುರ್ವೇದ, ಯೋಗ ಮತ್ತು ಪ್ರಕೃತಿಚಿಕಿತ್ಸೆ, ಯುನಾನಿ, ಸಿದ್ಧ ಮತ್ತು ಹೋಮಿಯೋಪಥಿ (ಆಯುಷ್) ಆಸ್ಪತ್ರೆಗಳನ್ನು ದೇಶದ ಎಲ್ಲಾ ಜಿಲ್ಲೆಗಳಲ್ಲಿ ಸ್ಥಾಪಿಸಲಾಗುವುದು ಎಂದು ಕೇಂದ್ರದ ಆಯುಷ್‌ ಇಲಾಖೆ ರಾಜ್ಯ ಸಚಿವ ಶ್ರೀಪಾದ ನಾಯಕ್‌ ತಿಳಿಸಿದರು.

50 ಹಾಸಿಗೆಗಳ ಸಾಮರ್ಥ್ಯಯುಳ್ಳ 100 ಆಸ್ಪತ್ರೆಗಳನ್ನು ಈಗಾಗಲೇ ಆರಂಭಿಸಿದ್ದು, ರಾಜ್ಯ ಸರ್ಕಾರಗಳು ಪ್ರಸ್ತಾವನೆ ಸಲ್ಲಿಸಿದರೆ ಎಲ್ಲ ಜಿಲ್ಲೆಗಳಲ್ಲೂ ಸ್ಥಾಪನೆ ಮಾಡಲಾಗುವುದು ಎಂದು ಅವರು ಹೇಳಿದರು.

ಪ್ರತಿಕ್ರಿಯಿಸಿ (+)