ಐಎಸ್‌ ಪ್ರಭಾವ ಬೀರುವ ಮದರಸಾಗಳನ್ನು ಮುಚ್ಚಿ: ವಾಸೀಂ ರಿಜ್ವಿ

7
ಶಿಯಾ ವಕ್ಫ್‌ ಬೋರ್ಡ್‌ ಮುಖ್ಯಸ್ಥರಿಂದ ಪ್ರಧಾನಿಗೆ ಪ‍ತ್ರ

ಐಎಸ್‌ ಪ್ರಭಾವ ಬೀರುವ ಮದರಸಾಗಳನ್ನು ಮುಚ್ಚಿ: ವಾಸೀಂ ರಿಜ್ವಿ

Published:
Updated:
Prajavani

ಲಖನೌ: ’ಮುಸಲ್ಮಾನ ಮಕ್ಕಳ ಮೇಲೆ ಇಸ್ಲಾಮಿಕ್‌ ಸ್ಟೇಟ್‌ ಭಯೋತ್ಪಾದಕ ಸಂಘಟನೆ ಪ್ರಭಾವ ಬೀರುವ ದೇಶದ ಎಲ್ಲ ಮದರಸಾಗಳನ್ನು ತಕ್ಷಣವೇ ಮುಚ್ಚಬೇಕು‘ ಎಂದು ಉತ್ತರಪ್ರದೇಶ ಶಿಯಾ ವಕ್ಫ್‌ ಬೋರ್ಡ್‌ ಮುಖ್ಯಸ್ಥ ವಾಸೀಂ ರಿಜ್ವಿ ಅವರು ಪ್ರಧಾನಿ ನರೇಂದ್ರಮೋದಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

’ಐಎಸ್‌ ಸಂಘಟನೆಯೂ ತಮ್ಮ ಉದ್ದೇಶಕ್ಕಾಗಿ ಮಕ್ಕಳನ್ನು ಗುರಿಯಾಗಿರಿಸಿಕೊಳ್ಳುತ್ತಿದ್ದು, ಕ್ರಮೇಣ ವಿಶ್ವದ ಎಲ್ಲ ಮುಸಲ್ಮಾನರ ಹಿಡಿತ ಪಡೆಯಲು ಪ್ರಯತ್ನಿಸುತ್ತಿದೆ. ಇಂತಹ ಚಟುವಟಿಕೆಗಳು ನಡೆಯುವ ಮದರಸಾಗಳನ್ನು ಮುಚ್ಚದಿದ್ದರೆ, ಮುಂದಿನ 15 ವರ್ಷಗಳಲ್ಲಿ ದೇಶದ ಅರ್ಧದಷ್ಟು ಮುಸಲ್ಮಾನರು ಈ ಸಂಘಟನೆಯ ಬೆಂಬಲಿಗರಾಗುವ ಅಪಾಯವಿದೆ‘ ಎಂದು ಪತ್ರದಲ್ಲಿ ಎಚ್ಚರಿಸಿದ್ದಾರೆ.

’ಕಾಶ್ಮೀರ ಕಣಿವೆಯಲ್ಲಿ ಐಎಸ್‌ ಸಂಘಟನೆ ಚಟುವಟಿಕೆ ಬೆಳೆಯುತ್ತಿರುವುದು ಕಾಣುತ್ತಿದೆ, ಮದರಸಾಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಒದಗಿಸಲಾಗುತ್ತಿದೆ. ಇಸ್ಲಾಮಿಕ್‌ ಶಿಕ್ಷಣದ ಹೆಸರಿನಲ್ಲಿ ಮೂಲಭೂತವಾದ ಚಿಂತನೆ ಹರಡಲಾಗುತ್ತಿದ್ದು, ಇದರಿಂದ ದೇಶ ಹಾಗೂ ಮಕ್ಕಳಿಗೂ ಹಾನಿಯಾಗಲಿದೆ‘ ಎಂದು ಅವರು ತಿಳಿಸಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಹಾಗೂ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ರಿಜ್ವಿ ಬೆಂಬಲ ವ್ಯಕ್ತಪಡಿಸಿದ್ದರು.

ಬರಹ ಇಷ್ಟವಾಯಿತೆ?

 • 3

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !