ಉಸಿರಾಟ ಸಮಸ್ಯೆಯಿಂದ ಸಿದ್ಧಗಂಗಾಶ್ರೀ ಚೇತರಿಕೆ

7

ಉಸಿರಾಟ ಸಮಸ್ಯೆಯಿಂದ ಸಿದ್ಧಗಂಗಾಶ್ರೀ ಚೇತರಿಕೆ

Published:
Updated:

ತುಮಕೂರು: ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರಿಗಿದ್ದ ಉಸಿರಾಟದ ಸಮಸ್ಯೆ ಕಡಿಮೆಯಾಗುತ್ತಿದ್ದು, ಶನಿವಾರ ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ಸ್ವಾಮೀಜಿ ಸಹಜವಾಗಿ ಉಸಿರಾಟ ನಡೆಸಿದ್ದಾರೆ.

‘ಸ್ವಾಮೀಜಿ ಸಿದ್ಧಗಂಗಾ ಆಸ್ಪತ್ರೆಯಲ್ಲಿದ್ದಾಗ 4-5 ತಾಸು ಸಹಜವಾಗಿ ಉಸಿರಾಡುತ್ತಿದ್ದರು. ಜನವರಿ 16ರ ಬೆಳಿಗ್ಗೆ ಅವರನ್ನು ಮಠಕ್ಕೆ ಸ್ಥಳಾಂತರಿಸಲಾಯಿತು. ಆ ನಂತರ ಕೇವಲ 1 ತಾಸು, ಅರ್ಧ ತಾಸು ಮಾತ್ರ ಸಹಜವಾಗಿ ಉಸಿರಾಡುತ್ತಿದ್ದರು. ಗುರುವಾರ ರಾತ್ರಿಯಿಂದ ಉಸಿರಾಟದಲ್ಲಿ ಚೇತರಿಕೆ ಕಂಡುಬಂದಿದೆ. ಶುಕ್ರವಾರ ರಾತ್ರಿ 4-5 ತಾಸು ಕೃತಕ ಉಸಿರಾಟದ ಸಹಾಯವಿಲ್ಲದೆ, ಸಹಜವಾಗಿ ಉಸಿರಾಡಿದ್ದರು’ ಎಂದು ಚಿಕಿತ್ಸೆ ನೀಡುತ್ತಿರುವ ಸಿದ್ಧಗಂಗಾ ಆಸ್ಪತ್ರೆ ವೈದ್ಯ ಡಾ.ಪರಮೇಶ್ ತಿಳಿಸಿದರು.

ಇದನ್ನೂ ಓದಿ...  ‘ದೈವಿ ಶಕ್ತಿ ಪ್ರಭಾವ’: ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ ಚೇತರಿಕೆ

ಶನಿವಾರ ಬೆಳಿಗ್ಗೆ ನಡೆಸಿದ ತಪಾಸಣೆ, ರಕ್ತ ಪರೀಕ್ಷೆಯ ವರದಿ ಪ್ರಕಾರ ಶ್ವಾಸಕೋಶದ ಸೋಂಕು ಕಡಿಮೆಯಾದರೂ ಅಲ್ಬುಮಿನ್ ಪ್ರೊಟೀನ್ ಅಂಶ ನಿರೀಕ್ಷಿತ ಮಟ್ಟಕ್ಕೆ ಏರಿಕೆಯಾಗುತ್ತಿಲ್ಲ. ಶುಕ್ರವಾರ 2.7 ಇದ್ದ ಈ ಅಂಶ ಶನಿವಾರ ಬೆಳಿಗ್ಗೆ ತಪಾಸಣೆ ನಂತರ ಶೇ 1 ರಷ್ಟು ಮಾತ್ರ ಹೆಚ್ಚಾಗಿದೆ ಎಂದರು.

‘ಶ್ವಾಸಕೋಶದಲ್ಲಿ ನೀರು ಸಂಗ್ರಹ ಆಗುವುದು ಕಡಿಮೆ ಆಗಿಲ್ಲ. ನೀರು ತೆಗೆಯುತ್ತಿದ್ದೇವೆ. ಪ್ರೊಟೀನ್ ಅಂಶ ಹೆಚ್ಚಾದರೆ ನೀರು ಸಂಗ್ರಹ ಆಗುವುದು ಕಡಿಮೆ ಆಗಲಿದೆ. ಸದ್ಯ ಸ್ವಾಮೀಜಿ ಕಣ್ಣು ಬಿಡುತ್ತಾರೆ, ಕೈ, ಕಾಲು ಆಡಿಸುತ್ತಿದ್ದಾರೆ. ಗ್ಲೂಕೋಸ್ ಅನ್ನು ಆಹಾರ ರೂಪದಲ್ಲಿ ನೀಡಲಾಗುತ್ತಿದೆ’ ಎಂದು ವಿವರಿಸಿದರು.

ಅಂಧ ಮಕ್ಕಳಿಂದ ಪಂಚಾಕ್ಷರಿ ಮಂತ್ರ ಪಠಣ


74  ವಿದ್ಯಾರ್ಥಿಗಳಿಂದ ಮಂತ್ರ ಪಠಣ

ಹಳೇಮಠದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ಚೇತರಿಕೆಗೆ ಪ್ರಾರ್ಥಿಸಿ ಮಠದ ಅಂಧಮಕ್ಕಳ ಶಾಲೆಯ ಈಗಿನ ಮತ್ತು ಹಳೆಯ ಕೆಲ ವಿದ್ಯಾರ್ಥಿಗಳು ಪಂಚಾಕ್ಷರಿಮಂತ್ರ ಪಠಿಸಿದರು. ಪಂಚಾಕ್ಷರಿ ಮಂತ್ರ ಪಠಣದಿಂದ (ವೈಬ್ರೇಷನ್) ಸ್ವಾಮೀಜಿ ಅವರ ಆರೋಗ್ಯ ಚೇತರಿಕೆ ಆಗಲಿದೆ ಎಂಬ ಆಶಯ ಇವರದ್ದಾಗಿದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !